ADVERTISEMENT

ಮೂವರ ದಾರುಣ ಸಾವು

​ಪ್ರಜಾವಾಣಿ ವಾರ್ತೆ
Published 24 ಮೇ 2017, 6:20 IST
Last Updated 24 ಮೇ 2017, 6:20 IST

ಕಲಬುರ್ಗಿ: ಇಲ್ಲಿನ ಸೇಡಂ ರಸ್ತೆಯ ಗೀತಾ ನಗರ ಬಳಿ ಸೋಮವಾರ ತಡರಾತ್ರಿ ಕಾರು ಮರಕ್ಕೆ ಡಿಕ್ಕಿ ಹೊಡೆದು, ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪೂಜ್ಯ ದೊಡ್ಡಪ್ಪ ಅಪ್ಪ (ಪಿಡಿಎ) ಎಂಜಿನಿಯರಿಂಗ್ ಕಾಲೇಜಿನ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಾದ ಪ್ರತ್ಯಕ್ಷ (24), ನೊಯೆಲ್ ಪ್ರತೀಕ್ (24) ಮತ್ತು ಉದ್ಯಮಿ ಶರಣಬಸಪ್ಪ ಪಾಟೀಲ (33) ಮೃತಪಟ್ಟವರು. ವಿಶಾಲ ಮತ್ತು ನಾಗರಾಜ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ವಿಶಾಲ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಈ ಐದೂ ಜನರು ಊಟ ಮಾಡುವುದಕ್ಕಾಗಿ ಸೋಮವಾರ ತಡರಾತ್ರಿ ಸೇಡಂ ರಸ್ತೆಯ ಡಾಬಾವೊಂದಕ್ಕೆ ತೆರಳಿದ್ದರು. ವಾಪಸು ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡಿದಿದೆ.

ADVERTISEMENT

ವಿಷಯ ತಿಳಿದ ಮೃತರ ಪೋಷಕರು ಹಾಗೂ ಪಿಡಿಎ ಕಾಲೇಜಿನ ವಿದ್ಯಾರ್ಥಿ ಗಳು ಇಲ್ಲಿನ ಜಿಲ್ಲಾಸ್ಪತ್ರೆ ಆವರಣದ­ಲ್ಲಿರುವ ಶವಾಗಾರದ ಬಳಿ ಹೆಚ್ಚಿನ ಸಂಖ್ಯೆ ಯಲ್ಲಿ ಜಮಾಯಿಸಿದ್ದರು. ವಿದ್ಯಾರ್ಥಿ­ಗಳು ಮೃತಪಟ್ಟ ಹಿನ್ನೆಯಲ್ಲಿ ಪಿಡಿಎ ಕಾಲೇಜು ಆಡಳಿತ ಮಂಡಳಿ ರಜೆ ಘೋಷಿಸಿತ್ತು. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* * 

ಪ್ರತಿಭಾವಂತ ವಿದ್ಯಾರ್ಥಿಗಳು
‘ಪ್ರತ್ಯಕ್ಷ ಹಾಗೂ ಪ್ರತೀಕ್ 8ನೇ ಸೆಮಿಸ್ಟರ್ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಓದು­ತ್ತಿ­ದ್ದರು. ಇಬ್ಬರೂ ಪ್ರತಿಭಾವಂತ­ರಾಗಿದ್ದು, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊ ಳ್ಳುತ್ತಿದ್ದರು. ಪ್ರತೀಕ್ ಒಳ್ಳೆಯ ಸಂಗೀತ ಗಾರನಾಗಿದ್ದ.ಕಾಲೇಜಿನಲ್ಲಿ ನಡೆಯುವ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗ ವಹಿಸುತ್ತಿದ್ದ’ ಎಂದು ಪ್ರತೀಕ್‌ನ ಸ್ನೇಹಿತರು ಹೇಳಿದರು.

ಪ್ರತೀಕ್ ಒಬ್ಬನೇ ಮಗ: ನೊಯೆಲ್ ಪ್ರತೀಕ್ ಅವರ ತಂದೆ–ತಾಯಿಗೆ ಒಬ್ಬನೇ ಮಗ. ತಂದೆ ಸ್ಟೀವನ್ ನಿವೃತ್ತಿ ಸರ್ಕಾರಿ ಉದ್ಯೋಗಿ. ತಾಯಿ ಶಿಕ್ಷಕಿಯಾಗಿದ್ದು, ಇದೀಗ ಅನಾರೋಗ್ಯದಿಂದ ಬಳಲುತ್ತಿ­ದ್ದಾರೆ. ಮಗನ ಸಾವಿನ ಸುದ್ದಿ ತಿಳಿದ ತಂದೆ ಸ್ಟೀವನ್ ಕಣ್ಣೀರಾಗಿದ್ದರು.

ಸ್ನೇಹಿತರು, ಬಂಧುಗಳು ಸಮಾಧಾನ ಪಡಿಸುತ್ತಿದ್ದರೂ ಅವರ ದುಃಖದ ಕಟ್ಟೆ ಒಡೆದುಹೋಗಿತ್ತು. ಮೊಬೈಲ್‌ ಕರೆಗ ಳನ್ನು ಸ್ವೀಕರಿಸುತ್ತಿದ್ದ ಅವರು, ‘ಹಾ, ಹೌದು. ಇಲ್ಲೇ ಇದ್ದೇನೆ’ ಎಂದಷ್ಟೇ ಉತ್ತರಿಸುತ್ತಿದ್ದ ದೃಶ್ಯ ಶವಾಗಾರದ ಬಳಿ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.