ADVERTISEMENT

ರೈಲು ನಿಲ್ದಾಣ ಕಾಮಗಾರಿ ಕಳಪೆ: ಆರೋಪ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 9:07 IST
Last Updated 16 ಏಪ್ರಿಲ್ 2017, 9:07 IST

ಕಮಲಾಪುರ: ‘ಇಲ್ಲಿನ ರೈಲು ನಿಲ್ದಾಣದ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿದ್ದು, ಕೂಡಲೆ ಗುತ್ತಿಗೆದಾರ ಹಾಗೂ ಜೆಇ ವಿರುದ್ಧ ಕ್ರಮ ಕೈಗೊಂಡು ಗುಣಮಟ್ಟದ ಕಾಮಗಾರಿಗೆ ತಾಕೀತು ಮಾಡಬೇಕು’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುಭಾಶ ಬಿರಾದಾರ ಒತ್ತಾಯಿಸಿದ್ದಾರೆ.

‘ಕಟ್ಟಡ ಕಾಮಗಾರಿ ಸೇರಿದಂತೆ ಎಲ್ಲ ಕಡೆ ಮರಳಿನ ಬದಲು ದಪ್ಪವಾದ ಕಂಕರ್‌ ಚೂರಾ ಬಳಸುತ್ತಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಸಿಮೆಂಟ್‌ ಬೆರೆಸುತ್ತಿಲ್ಲ. ಮುಟ್ಟಿದರೆ ಗೋಡೆಯೊಳಗಿಂದ ಕಂಕರ್ ಉದುರುತ್ತಿದ್ದೆ. ಇದರ ಮೇಲೆ ಸಣ್ಣ–ಸಣ್ಣ ಶಹಾಬಾದ ಕಲ್ಲಿನಿಂದ ಗೋಡೆ ಕಟ್ಟಿದ್ದಾರೆ. ಒಂದು ಬಾರಿ ರೈಲು ಸಂಚರಿಸಿದರೆ ಸಾಕು, ಈ ಪ್ಲಾಟ್‌ ಫಾರಂ ಗೋಡೆ ಕುಸಿದು ಬೀಳುತ್ತದೆ’ ಎಂದು ದೂರಿದ್ದಾರೆ.

‘ಕಟ್ಟಡ ನಿರ್ಮಾಣದ ನಂತರ ಒಂದು ಬಾರಿಯೂ ಕ್ಯೂರಿಂಗ್‌ ಮಾಡುತ್ತಿಲ್ಲ. ಗೋಡೆ ಎಲ್ಲೆಂದರಲ್ಲಿ ಬಿರುಕು ಬಿಟ್ಟಿದೆ.ನಿಲ್ದಾಣದ ಕೆಲವು ಕಡೆ ಗ್ರ್ಯಾನೇಟ್‌ ಕಲ್ಲು, ಕೆಲವು ಕಡೆ ಶಹಾಬಾದ್‌ ಕಲ್ಲು  ಹಾಸುತ್ತಿದ್ದಾರೆ. ಇದರಲ್ಲಿಯೂ ಕಂಕರ್‌ ಚೂರಾವನ್ನೆ ಬಳಸುತ್ತಿದ್ದಾರೆ. ಈಗಾಗಲೆ ಕಿತ್ತುಹೋಗಿವೆ.

ADVERTISEMENT

ಸಂಪೂರ್ಣ ಕಳಪೆ ಕಾಮಗಾರಿ ಮಾಡುವ ಮೂಲಕ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಹಣ ಲಪಟಾಯಿಸುತ್ತಿದ್ದಾರೆ’ ಎಂದು ಸಮಾಜವಾದಿ ಪಕ್ಷದ ಪರಿಶಿಷ್ಟ ಜಾತಿ, ಪಂಗಡದ ಜಿಲ್ಲಾ ಘಟಕದ ಅಧ್ಯಕ್ಷ ಅಮೃತಗೌರೆ ಆರೋಪಿಸಿದ್ದಾರೆ.

‘ಎಲ್ಲ ಕಾಮಗಾರಿಗಳನ್ನು ತುಂಡು ಗುತ್ತಿಗೆ ಪಡೆದಿದ್ದು,  ಕಾಮಗಾರಿ ಕಳಪೆಮಟ್ಟದ್ದಾಗಿದೆ. ಸ್ಥಗಿತ ಗೊಳಿಸುವಂತೆ ಹೇಳಿದರೆ ಪ್ರಯೋಜನವಾಗಿಲ್ಲ ಎಂದು ಅವರು ದೂರುತ್ತಾರೆ.
‘ಅಧಿಕಾರಿಗಳು ಗುತ್ತಿಗೆದಾರರು ಕೇವಲ ಕಾಮಗಾರಿ ಮುಗಿಸುವ ಧಾವಂತದಲ್ಲಿದ್ದಾರೆ. ಗುಣಮಟ್ಟದ ಕಾಮಗಾರಿ ಕೈಗೊಂಡಿಲ್ಲ. ಎಚ್ಚೆತ್ತು ಜಿಲ್ಲಾಡಳಿತ ಎಚ್ಚೆತ್ತು ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ನಿವೃತ್ತ ಶಿಕ್ಷಕ ಪುಂಡಲೀಕರಾವ ಚಿರಡೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.