ADVERTISEMENT

17 ಸಾವಿರ ಕ್ಯುಸೆಕ್‌ ನೀರು ಭೀಮಾನದಿಗೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 6:41 IST
Last Updated 22 ಸೆಪ್ಟೆಂಬರ್ 2017, 6:41 IST
ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಭೀಮಾ ಜಲಾಶಯದಿಂದ 3ಗೇಟ್‌ಗಳ ಮೂಲಕ ಗುರುವಾರದಿಂದ 17ಸಾವಿರ ಕ್ಯುಸೆಕ್‌ ನೀರು ಬಿಡಲಾಗುತ್ತಿದೆ
ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಭೀಮಾ ಜಲಾಶಯದಿಂದ 3ಗೇಟ್‌ಗಳ ಮೂಲಕ ಗುರುವಾರದಿಂದ 17ಸಾವಿರ ಕ್ಯುಸೆಕ್‌ ನೀರು ಬಿಡಲಾಗುತ್ತಿದೆ   

ಅಫಜಲಪುರ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾನದಿಗೆ ಮತ್ತೆ 17 ಸಾವಿರ ಕ್ಯುಸೆಕ್‌ ನೀರು ಬಿಡಲಾಗಿದ್ದು, ಅಷ್ಟೇ ಪ್ರಮಾಣದ ನೀರನ್ನು ಅಫಜಲಪುರದ ಸೊನ್ನ ಭೀಮಾ ಜಲಾಶಯದಿಂದ 3ಗೇಟ್‌ಗಳ ಮುಖಾಂತರ ನದಿಗೆ ಬಿಡಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮ ಅಫಜಲಪುರ ವಿಭಾಗದ ಕಾರ್ಯಪಾಲಕ ಲಕ್ಷ್ಮೀಕಾಂತ ಅಗ್ನಿಹೋತ್ರಿ ತಿಳಿಸಿದರು.

ಈ ಕುರಿತು ಗುರುವಾರ ಮಾಹಿತಿ ನೀಡಿದ ಅವರು, ಭೀಮಾ ಬ್ಯಾರೇಜ್‌ನಲ್ಲಿ ಸದ್ಯಕ್ಕೆ 405.8 ಮೀ. ನೀರು ಸಂಗ್ರಹಿಸಲಾಗಿದೆ. ಹೆಚ್ಚಿನ ನೀರನ್ನು ಭೀಮಾ ಜಲಾಶಯದ ಮುಖಾಂತರ ನದಿಗೆ ಬಿಡಲಾಗುತ್ತಿದೆ. ಇನ್ನೊಂದು ಕಡೆ ವಿದ್ಯುತ್‌ ಉತ್ಪಾದನೆ ಘಟಕದಿಂದಲೂ ನೀರು ಭೀಮಾನದಿಗೆ ಬಿಡಲಾಗುತ್ತಿದೆ.

ಹಾಗಾಗಿ, ರೈತರು ಭೀಮಾನದಿ ದಡಕ್ಕೆ ಹೋಗಕೂಡದು ಮತ್ತು ಜಾನುವಾರುಗಳನ್ನು ಬಿಡಕೂಡದು. ನೀರಿನ ಹರಿಯುವಿಕೆ ಇನ್ನೂ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.