ADVERTISEMENT

ಅಂಬೇಡ್ಕರ್ ಚಿಂತನೆ ಯುವ ಜನಾಂಗಕ್ಕೆ ದಾರಿದೀಪ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 7:54 IST
Last Updated 1 ಮಾರ್ಚ್ 2017, 7:54 IST

ಗೋಣಿಕೊಪ್ಪಲು: ಅಂಬೇಡ್ಕರ್ ತಮ್ಮ ಜ್ಞಾನದ  ಮೂಲಕ  ಸಮಾಜದಲ್ಲಿನ ಜಾತೀಯತೆ, ಮತಾಂಧತೆ ತೊಡೆದು ಹಾಕಲು ಶ್ರಮಿಸಿದರು ಎಂದು   ಮೈಸೂರು ವಿಶ್ವವಿದ್ಯಾನಿಲಯದ  ಡಾ.ಬಿ.ಆರ್. ಅಂಬೇಡ್ಕರ್ ಸಂಶೋ ಧನಾ ಹಾಗೂ ವಿಸ್ತರಣಾ ಕೇಂದ್ರದ ಸಂಶೋಧಕ ಡಿ.ಜೆ.ಶಶಿಕುಮಾರ್ ಹೇಳಿದರು.

ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಮಂಗಳವಾರ ಸಮಾಜಕಲ್ಯಾಣ ಇಲಾಖೆ ಹಾಗೂ ಅಂಬೇಡ್ಕರ್ ಸಂಶೋಧನಾ ಕೇಂದ್ರ ಮಂಗಳವಾರ ಅಂಬೇಡ್ಕರ್ ಅವರ ‘125ನೇ ಜಯಂತಿ ವರ್ಷಾಚರಣೆ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಿದರೆ ಮಾತ್ರ ಹಿಂದೂ ಸಮಾಜ ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯ ಎಂದು ಹೇಳಿದರು.

ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಎ.ಸಿ.ಗಣಪತಿ ಮಾತನಾಡಿ, ಅಂಬೇಡ್ಕರ್  ಕೇವಲ ಒಂದು ಸಮುದಾಯದ ನಾಯಕರಲ್ಲ. ಅವರು ದೇಶದ ನಾಯಕರು. ಅವರ ಆದರ್ಶ ಚಿಂತನೆಗಳು ಇಂದಿಗೂ ಯುವ ಜನತೆಗೆ ದಾರಿದೀಪ ಎಂದು ನುಡಿದರು.

ಉಪ ಪ್ರಾಂಶುಪಾಲ ಪ್ರೊ. ಎಂ.ಡಿ. ಅಕ್ಕಮ್ಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಂಬೇಡ್ಕರ್ ಜ್ಞಾನ ದರ್ಶನ ಅಭಿಯಾನ ಸಂಯೋಜಕ ವಿನಯ ಕುಮಾರ್, ವಿರಾಜಪೇಟೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಡಿ. ಮುರುಳಿ, ವಲಯ ಸಂಯೋಜನಾಧಿಕಾರಿ ಸಿದ್ದರಾಜು, ಉಪನ್ಯಾಸಕಿ ಸಿ.ಟಿ.ಕಾವ್ಯ,  ಪ್ರಿಯ ಪೊನ್ನಮ್ಮ, ಕಾವ್ಯಾ, ಸಿ.ಎಂ. ಪೂವಮ್ಮ ಕವಿತಾ ಕುಮಾರಿ ಮತ್ತು ಶ್ರೀಧನ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.