ADVERTISEMENT

ಅರಣ್ಯ ಪ್ರದೇಶದಲ್ಲಿ ಅಕ್ರಮ ರಸ್ತೆ ನಿರ್ಮಾಣ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 8:55 IST
Last Updated 30 ನವೆಂಬರ್ 2017, 8:55 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಸೋಮವಾರಪೇಟೆ: ಅರಣ್ಯ ಪ್ರದೇಶದ ಒಳಗೆ ರಸ್ತೆ ನಿರ್ಮಿಸುತ್ತಿದ್ದ ಆರೋಪದ ಮೇಲೆ ಸಮೀಪದ ಬಾಣಾವರದಲ್ಲಿ ಇಬ್ಬರು ಅರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಬಂಧಿಸಿದ್ದಾರೆ.

ಗ್ರಾಮದ ಅರಣ್ಯಕ್ಕೆ ಹೊಂದಿಕೊಂಡಂತೆ ಬಾಣವಾರ ಗ್ರಾಮದ ಗಿಡ್ಡಮ್ಮ ಅವರ ಹೆಸರಿನಲ್ಲಿ ಕಲ್ಲುಕ್ವಾರಿಯೊಂದು ನಡೆಯುತ್ತಿತ್ತು. ಸ್ಥಳಕ್ಕೆ ವಾಹನಗಳು ತೆರಳಲು ಅರಣ್ಯದೊಳಗೆ ಹಿಟಾಚಿ ವಾಹನದ ಮೂಲಕ ಅಕ್ರಮವಾಗಿ ರಸ್ತೆಯನ್ನು ನಿರ್ಮಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಇಲ್ಲಿನ ವಲಯಾರಣ್ಯಾಧಿಕಾರಿ ಲಕ್ಷ್ಮೀಕಾಂತ್ ಮತ್ತು ಸಿಬ್ಬಂದಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕ್ವಾರಿಯ ವ್ಯವಸ್ಥಾಪಕ ಅಸೀಸ್, ಹಿಟಾಚಿ ವಾಹನದ ಚಾಲಕ ಬಿಜಾಯ್ ಅವರನ್ನು ಬಂಧಿಸಲಾಗಿದೆ. ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಅಕ್ರಮ ಪ್ರವೇಶ, ಅಕ್ರಮ ರಸ್ತೆ ನಿರ್ಮಾಣ, ಅರಣ್ಯದಲ್ಲಿದ್ದ ಗಂಧದ ಮರಗಳನ್ನು ಕಡಿದು ಹಾಕಲಾಗಿದೆ.

ADVERTISEMENT

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಹಾಯಕ ವಲಯಾರಣ್ಯಾಧಿಕಾರಿ ಮಹದೇವ್ ನಾಯಕ್, ಅರಣ್ಯ ರಕ್ಷಕ ರಾಜು, ನಿರೀಕ್ಷಕ ವೀರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.