ADVERTISEMENT

ಎಲ್ಲೆಡೆ ಪೊಲೀಸ್‌ ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 7:04 IST
Last Updated 11 ನವೆಂಬರ್ 2017, 7:04 IST

ಗೋಣಿಕೊಪ್ಪಲು: ಟಿಪ್ಪುಜಯಂತಿ ವಿರೋಧಿಸಿ ಕರೆ ನೀಡಿದ್ದ ಕೊಡಗು ಬಂದ್‌ಗೆ ಗೋಣಿಕೊಪ್ಪಲಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗಿನಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು.

ಖಾಸಗಿ ಬಸ್ ಮತ್ತು ಆಟೊ ಸಂಚಾರ ಸ್ಥಗಿತಗೊಂಡಿತ್ತು. ಬೈಕ್, ಕಾರು ಸೇರಿದಂತೆ ಖಾಸಗಿ ವಾಹನಗಳು ಸಂಚರಿಸಿದವು. ಮೈಸೂರು– ಗೋಣಿಕೊಪ್ಪಲು ಮಾರ್ಗದ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಓಡಾಟ ವಿರಳವಾಗಿತ್ತು. ಕೆಲವು ಸರ್ಕಾರಿ ಶಾಲಾ ಕಾಲೇಜುಗಳು ಮಧ್ಯಾಹ್ನದವರೆಗೆ ತೆರೆದಿದ್ದವು. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು, ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿಸಿದವು.

ಬಾಳೆಲೆಯಲ್ಲಿ ಅಲ್ಲಿನ ಗಣಪತಿ ದೇವಸ್ಥಾನದ ಬಳಿ ಟಿಪ್ಪುಜಯಂತಿ ವಿರೋಧಿ ಹೋರಾಟಗಾರರು ಕುಟ್ಟಪ್ಪ ಜಯಂತಿಯನ್ನು ಆಚರಿಸಿದರು. ತಿತಿಮತಿಯಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಪೊನ್ನಂಪೇಟೆಯಲ್ಲಿಯೂ ಬಂದ್ ಆಚರಿಸಲಾಯಿತು. ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಿಷೇಧಾಜ್ಞೆ ಇರುವ ಬಗ್ಗೆ ಪೊಲೀರು ಧ್ವನಿವರ್ದಕದಲ್ಲಿ ಪ್ರಚಾರ ಮಾಡುತ್ತಿದ್ದುದರಿಂದ ಮೆರವಣಿಗೆಯಾಗಲಿ, ಘೋಷಣೆ ಯಾಗಲಿ ಕಂಡು ಬರಲಿಲ್ಲ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.