ADVERTISEMENT

ಕಾಡಾನೆಗೆ ದಾಳಿ: ಭತ್ತದ ಪೈರು ಹಾನಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 8:26 IST
Last Updated 3 ಸೆಪ್ಟೆಂಬರ್ 2017, 8:26 IST
ಗೋಣಿಕೊಪ್ಪಲು ಬಳಿಯ ದೇವರಪುರದಲ್ಲಿ ನಾಟಿ ಮಾಡಿದ್ದ ಭತ್ತದ ಪೈರನ್ನು ಕಾಡಾನೆ ಹಿಂಡು ತುಳಿದು ತೊಂದು ನಾಷಪಡಿಸಿವೆ
ಗೋಣಿಕೊಪ್ಪಲು ಬಳಿಯ ದೇವರಪುರದಲ್ಲಿ ನಾಟಿ ಮಾಡಿದ್ದ ಭತ್ತದ ಪೈರನ್ನು ಕಾಡಾನೆ ಹಿಂಡು ತುಳಿದು ತೊಂದು ನಾಷಪಡಿಸಿವೆ   

ಗೋಣಿಕೊಪ್ಪಲು: ಕಾಡಾನೆಗಳ ಹಿಂಡು ದೇವರಪುರದಲ್ಲಿ ಭತ್ತದ ಗದ್ದೆಗೆ ದಾಳಿ ಮಾಡಿದ್ದು, ಪೈರುಗಳು ಹಾನಿಗೊಂಡಿವೆ. ಕಾಡಾನೆಗಳ ದಾಳಿಯಿಂದ ನಾಟಿ ಮಾಡಿದ್ದ ಭತ್ತದ ಪೈರು ಚಿಗುರುವ ವಿಶ್ವಾಸವು ಇಲ್ಲವಾಗಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

‌ಅರಣ್ಯದಂಚಿನಲ್ಲಿ ಗದ್ದೆಗಯಲ್ಲಿ ರಾಜಕುಮಾರ್ ಭತ್ತ ನಾಟಿ ಮಾಡಿದ್ದರು. ಕೂಲಿ ಹಣ ಹೆಚ್ಚಿದ್ದರೂ, ಗದ್ದೆ ಪಾಳು ಬಿಡಲಾಗದೆ ಕೃಷಿ ಕಾರ್ಯಕೈಗೊಂಡಿದ್ದರು. ಆದರೆ, ಈಚೆಗೆ ಕಾಡಾನೆಗಳ ದಾಳಿ ಆತಂಕ ಮೂಡಿಸಿದೆ. ಮಳೆ, ಕೂಲಿ ವೆಚ್ಚದ ನಡುವೆಯೂ ನಾಟಿ ಶ್ರಮ ಫಲ ಕೊಡುವ ವಿಶ್ವಾಸ ನಶಿಸುತ್ತಿದೆ ಎನ್ನುತ್ತಾರೆ ಕೃಷಿಕ.

ದೇವರಪುರ, ತಾರಿಕಟ್ಟೆ, ತಿತಿಮತಿ, ಭಾಗಗಳಲ್ಲಿ ಕಾಡಾನೆ ಹಾವಳಿ ಅತಿಯಾಗಿದೆ. ರೈತರು ಕಾಫಿತೋಟ, ಗದ್ದೆಗಳಿಗೆ ಹೋಗಲು ಭಯಪಟ್ಟರೆ, ವಿದ್ಯಾರ್ಥಿಗಳು ಆತಂಕದಿಂದಲೇ ಓಡಾಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು. ಬೆಳೆ ನಾಶದ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.