ADVERTISEMENT

ಕೊಡವ ಮಂದ್ ನಮ್ಮೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 9:15 IST
Last Updated 25 ಡಿಸೆಂಬರ್ 2017, 9:15 IST

ಗೋಣಿಕೊಪ್ಪಲು: ಯುನೈಟೆಡ್ ಕೊಡವ ಆರ್ಗನೈಜೇಷನ್ (ಯುಕೊ) ಎರಡು ದಿನ ಆಯೋಜಿಸಿರುವ ಕೊಡವ ಮಂದ್ ನಮ್ಮೆಗೆ ಭಾನುವಾರ ಇಲ್ಲಿನ ಕಾವೇರಿ ಕಾಲೇಜಿನ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಗೋಣಿಕೊಪ್ಪಲು ಕೊಡವ ಸಮಾಜದ ಅಧ್ಯಕ್ಷ ಚೆಕ್ಕೆರ ಸೋಮಯ್ಯ ಮಂದ್ ನಮ್ಮೆಯನ್ನು ಉದ್ಘಾಟಿಸಿ, ಕೊಡವ ಸಂಪ್ರದಾಯ, ಸಂಸ್ಕೃತಿ ಉಳಿವಿಗೆ ನಮ್ಮೆ ಸಹಕಾರಿಯಾಗಲಿದೆ. ಹಬ್ಬ ಹರಿದಿನಗಳು ಜನಾಂಗವನ್ನು ಒಂದುಗೂಡಿಸುವ ಜತೆಗೆ, ಅಳಿವಿನ ಅಂಚಿನಲ್ಲಿರುವ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಲು ಉತ್ತಮ ವೇದಿಕೆಯಾಗಲಿವೆ ಎಂದು ನುಡಿದರು.

ಹಿರಿಯ ವೈದ್ಯ ಕಾಳಿಮಾಡ ಶಿವಪ್ಪ, ಶರೀರ ದೃಢಕಾಯವಾಗಿ, ಆರೋಗ್ಯವಾಗಿ ಇರಬೇಕಾದರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕು. ಆರೋಗ್ಯಕರ ಶರೀರ ಮಾನಸಿಕ ಆರೋಗ್ಯವನ್ನೂ ಕಾಪಾಡಲಿದೆ ಎಂದು ಹೇಳಿದರು. ಹಿರಿಯ ಮುಖಂಡ ನೆಲ್ಲಮಕ್ಕಡ ಧರುಣ್, ಯುಕೊ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿದರು.

ADVERTISEMENT

ಸೋಮವಾರ ಬೆಳಿಗ್ಗೆ ಪಟ್ಟಣದಲ್ಲಿ ಕೊಡವ ಸಾಂಪ್ರದಾಯಕ ಉಡುಪಿನಲ್ಲಿ ಮೆರವಣಿಗೆ ನಡೆಯಲಿದೆ. ಬಳಿಕ ಸಭಾಕಾರ್ಯಕ್ರಮದಲ್ಲಿ ಸಂಸದ ನಳೀನ್‌ಕುಮಾರ್ ಕಟೀಲ್ ಪಾಲ್ಗೊಳ್ಳಲಿದ್ದಾರೆ. ತೀತಿರಮಾಡ ಬೋಸ್, ನೆಲ್ಲಮಕ್ಕಡ ಮಾದಯ್ಯ, ಕಳ್ಳಿಚಂಡ ರಾಬಿನ್, ಅಣ್ಣೀರ ಹರೀಶ್, ಲೋಹಿತ್ ಭೀಮಯ್ಯ, ಚೆಪ್ಪುಡೀರ ಸುಜು ಕರುಂಬಯ್ಯ ಹಾಜರಿದ್ದರು. ಬಳಿಕ ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಬಾಳೊ ಪಾಟ್, ವಾಲಗತ್ತಾಟ್, ಕಪ್ಪೆಯಾಟ್ ಮೊದಲಾದ ಸ್ಪರ್ಧೆ ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.