ADVERTISEMENT

ಜೋಡುಪಾಲ ಜಲಪಾತದ ಸೊಬಗು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2017, 7:28 IST
Last Updated 29 ಆಗಸ್ಟ್ 2017, 7:28 IST
ಮಡಿಕೇರಿ – ಮಂಗಳೂರು ಮುಖ್ಯರಸ್ತೆಯಲ್ಲಿರುವ ಜೋಡುಪಾಲ ಜಲಪಾತ
ಮಡಿಕೇರಿ – ಮಂಗಳೂರು ಮುಖ್ಯರಸ್ತೆಯಲ್ಲಿರುವ ಜೋಡುಪಾಲ ಜಲಪಾತ   

ನಾಪೋಕ್ಲು: ಎರಡು ದಿನಗಳಿಂದ ಮಳೆ ಬಿರುಸುಗೊಂಡಿದ್ದು ಜಿಲ್ಲೆಯ ಪ್ರವಾಸಿ ತಾಣಗಳೆಲ್ಲವೂ ಸೌಂದರ್ಯವನ್ನು ಹೆಚ್ಚಿಸಿಕೊಂಡು ಮನಮೋಹಕವಾಗಿದೆ. ಮಳೆ ಹೆಚ್ಚಿದಂತೆ ಜಲಪಾತಗಳು ಭೋರ್ಗರೆಯುತ್ತಿವೆ.

ಸಾಲು ಸಾಲು ರಜೆಗಳಲ್ಲಿ ಮಳೆ, ಚಳಿಗೆ ಮೈಯೊಡ್ಡಲು ಮಳೆಗಾಲದಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನು ಜಿಲ್ಲೆಯ ಜಲಪಾತಗಳು ಸೆಳೆಯುತ್ತಿವೆ. ರಭಸದ ಮಳೆಗೆ ಬೆಟ್ಟಗುಡ್ಡಗಳಿಂದ ಧುಮ್ಮಿಕ್ಕುವ ಹತ್ತಾರು ಜಲಧಾರೆಗಳು ಜಲಪಾತಗಳಾಗಿ ರೂಪುತಳೆಯುತ್ತವೆ.

ಅಂತಹ ಒಂದು ಪ್ರಮುಖ ಜಲಪಾತ ಜೋಡುಪಾಲ ಜಲಪಾತ. ಇದು ಮಡಿಕೇರಿ–ಮಂಗಳೂರು ಮುಖ್ಯರಸ್ತೆಯಲ್ಲಿದೆ.ಮಡಿಕೇರಿಯಿಂದ ಸುಳ್ಯದ ಕಡೆಗೆ ತೆರಳುವ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ. ಮಡಿಕೇರಿಗೆ ಜಲಪಾತಗಳನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಿಗೂ ಇದು ಆಕರ್ಷಕವಾಗಿ ಸೆಳೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.