ADVERTISEMENT

ನೋಟು ರಹಿತ ವ್ಯವಹಾರ ಪ್ರೋತ್ಸಾಹಿಸಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 11:17 IST
Last Updated 23 ಜನವರಿ 2017, 11:17 IST
ನೋಟು ರಹಿತ ವ್ಯವಹಾರ ಪ್ರೋತ್ಸಾಹಿಸಿ
ನೋಟು ರಹಿತ ವ್ಯವಹಾರ ಪ್ರೋತ್ಸಾಹಿಸಿ   

ಸುಂಟಿಕೊಪ್ಪ: ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳೇ ಆಸ್ತಿಯಾ ಗಿದ್ದು, ಅವರು ನೋಟು ರಹಿತ ವ್ಯವಹಾ ರವನ್ನು ಪ್ರೋತ್ಸಾಹಿಸುವ ಮೂಲಕ ದೇಶದ ಪ್ರಗತಿಗೆ ಕಾರಣಕರ್ತರಾಗಬೇಕು ಎಂದು ಡಿಸಿಸಿ ಬ್ಯಾಂಕಿನ ನಿರ್ದೇಶಕ  ಬಲ್ಲರಂಡ ಮಣಿ ಉತ್ತಪ್ಪ ಹೇಳಿದರು.

ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಬಾರ್ಡ್ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಸುಂಟಿ ಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಂಘ ಮತ್ತು ಗಣಿತ ಕ್ಲಬ್ ಆಶ್ರಯದಲ್ಲಿ ಏರ್ಪಡಿ ಸಲಾಗಿದ್ದ ನೋಟು ರಹಿತ ಡಿಜಿಟಲ್ ಅರ್ಥಿಕ ಸಾಕ್ಷರತಾ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಿಡವನ್ನು ನಾವು ಬೆಳೆಸಿದಂತೆ ಅದು ಮರವಾಗಿ ಜನರಿಗೆ ನೆರಳು ನೀಡುವ ಮೂಲಕ ಪರಿಸರ ಸಂರಕ್ಷಿಸುತ್ತದೆ. ಅದೇ ರಿತಿ ವಿದ್ಯಾರ್ಥಿಗಳು ಉತ್ತಮ ವಿದ್ಯೆಯನ್ನು ಪಡೆದು ಸತ್ಪ್ರಜೆಗಳಾಗಿ ದೇಶಕ್ಕೆ ಅಳಿಲು ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧಿಕಾರಿ ತುಂಗರಾಜ್ ಮಾತನಾಡಿ, ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ರೈತರೇ ದೇಶದ ಬೆನ್ನೆಲುಬು ಗ್ರಾಮೀಣ ಪ್ರದೇಶದ ರೈತರ, ಮಧ್ಯಮ ವರ್ಗದವರ, ಕಾರ್ಮಿಕರ  ಶ್ರಮ ದೇಶದ ಉನ್ನತ್ತಿಗೆ ಕಾರಣವಾಗಿದೆ ಎಂದರು.

ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಾಗಭೂಷಣ್, ಸಂಪನ್ಮೂಲ ವ್ಯಕ್ತಿ ರಶಿತಾ, ಸ್ವ ಸಹಾಯ ಸಂಘಗಳ ನೋಡಲ್ ಅಧಿಕಾರಿ ಪಿ.ಸುಂದ್ರಾಜ್ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ನಬಾರ್ಡ್ ಜಿಲ್ಲಾ ಅಭಿವೃದ್ಧಿ ಯೋಜನೆಯ ಪ್ರದಾನ ವ್ಯವಸ್ಥಾಪಕ, ಸುಂಟಿಕೊಪ್ಪ ವಿಜಯಬ್ಯಾಂಕ್ ವ್ಯವಸ್ಥಾಪಕ ಸಂದೀಪ್, ಸೆಂಟ್ರಲ್ ಬ್ಯಾಂಕ್ ವ್ಯವಸ್ಥಾಪಕ ಆಚಾರ್ಯ, ಕೆನರಾಬ್ಯಾಂಕ್ ರವಿಕುಮಾರ್ ಇದ್ದರು.

ಸರ್ಕಾರಿ ಪ್ರೌಢಶಾಲೆಯ ಸಜನಾ ತಂಡದವರು ಪ್ರಾರ್ಥಿಸಿದರು ಶಿಕ್ಷಕ ಸಿ.ಟಿ.ಸೋಮಶೇಖರ್ ಸ್ವಾಗತಿಸಿದರು. ಸೌಂದರ್ಯ ನಿರೂಪಿಸಿದರು. ಟಿ.ಜಿ.ಪ್ರೇಮ್ ಕುಮಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.