ADVERTISEMENT

ಮದ್ಯದಂಗಡಿ ತೆರೆಯುವುದು ಬೇಡ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 7:11 IST
Last Updated 4 ಸೆಪ್ಟೆಂಬರ್ 2017, 7:11 IST

ನಾಪೋಕ್ಲು: ಮೂರ್ನಾಡು– ಕುಂಬಳದಾಳು ರಸ್ತೆಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಮುತ್ತಾರುಮುಡಿ ಗ್ರಾಮಸ್ಥರು ಕಾಂತೂರು ಮೂರ್ನಾಡು ಪಿಡಿಒಗೆ ಈಚೆಗೆ ಮನವಿ ಸಲ್ಲಿಸಿದರು.

ಸುಪ್ರೀಂಕೋರ್ಟ್‌ ಆದೇಶದನ್ವಯ ಮೂರ್ನಾಡು ಪಟ್ಟಣದಲ್ಲಿ ನಾಲ್ಕು ಮದ್ಯದಂಗಡಿಗಳು ಮುಚ್ಚಿವೆ. ಒಂದು ಮದ್ಯದಂಗಡಿಯನ್ನು ಕುಂಬಳದಾಳು ಗ್ರಾಮಕ್ಕೆ ಸಾಗುವ ರಸ್ತೆಯಲ್ಲಿ ತೆರೆಯುವ ಹುನ್ನಾರ ನಡೆಯುತ್ತಿದೆ.

ಮದ್ಯದಂಗಡಿ ತೆರೆಯುವ ಸ್ಥಳದಿಂದ ನೂರು ಮೀಟರ್ ದೂರದಲ್ಲಿ ಶಾಲೆ ಇದ್ದು, ಇದರಿಂದ ಶಾಲಾ ಮಕ್ಕಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚು. ಕುಂಬಳದಾಳು ಗ್ರಾಮಕ್ಕೆ ಸಾಗುವ ರಸ್ತೆ ತೀರ ಕಿರಿದಾಗಿದ್ದು ಬಸ್ಸು ಹಾಗೂ ಶಾಲಾ ವ್ಯಾನುಗಳ ಸಂಚಾರಕ್ಕೆ ತೊಡಕುಂಟಾಗುದಲ್ಲದೇ ಈ ಭಾಗದ ಜನರಿಗೆ ನಿತ್ಯ ಕಿರಿಕಿರಿ ಉಂಟಾಗಲಿದೆ ಎಂದಿರುವ ಗ್ರಾಮಸ್ಥರು ಮದ್ಯದಂಗಡಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ, ಅಬಕಾರಿ ಇಲಾಖೆ ಹಾಗೂ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.ಗ್ರಾಮದ ಬಾಲಕರ ವಿನಾಯಕ ಸಂಘ, ಗಂಗೋತ್ರಿ ಸಂಘ, ಅಕ್ಷಯ ಸ್ವಸಹಾಯ ಸಂಘ ಹಾಗೂ ಮುತ್ತಾರುಮುಡಿ ಗ್ರಾಮಸ್ಥರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.