ADVERTISEMENT

‘ಲಿಮ್ಕಾ ಬುಕ್ ಆಫ್ ರೆಕಾರ್ಡ್‌’ಗೆ ಶಾಂತೆಯಂಡ ಹಾಕಿ ನಮ್ಮೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 5:55 IST
Last Updated 16 ಏಪ್ರಿಲ್ 2017, 5:55 IST

ಮಡಿಕೇರಿ:  ಶಾಂತೆಯಂಡ ಕಪ್ ಹಾಕಿ ನಮ್ಮೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್, ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿರುವುದಕ್ಕೆ ಹರ್ಷವಾಗಿದೆ ಎಂದು ಜಿ.ಪಂ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊಡಗಿನ ಕೌಟುಂಬಿಕ ಹಾಕಿ ಮತ್ತೊಂದು ಹೆಮ್ಮೆಯ ಗರಿ ಮೂಡಿದ್ದು, ಕಳೆದ ಬಾರಿ ಹಾಕಿ ಆಯೋಜಕರಾದ ಶಾಂತೆಯಂಡ ಕುಟುಂಬಸ್ಥರು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಅತೀ ಹೆಚ್ಚು ತಂಡಗಳು ಪಾಲ್ಗೊಂಡು ಪ್ರೋತ್ಸಾಹಿಸಿದ್ದಾರೆ.

ಈ ಹಿಂದೆಯೂ ಬಿದ್ದಂಡ, ನೆಲ್ಲಮಕ್ಕಡ, ಕುಪ್ಪಂಡ ಕಪ್ ಹಾಕಿ ನಮ್ಮೆ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದು ಇದೀಗ 2016ರ ಶಾಂತೆಯಂಡ ಕಪ್ 299 ತಂಡಗಳ ಪಾಲ್ಗೊಳ್ಳುವಿಕೆಯೊಂದಿಗೆ ದಾಖಲೆ ಮತ್ತೊಮ್ಮೆ ಹೆಚ್ಚಾಗಿದೆ. ಶಾಂತೆಯಂಡ ಕಪ್ ಈ ದಾಖಲೆಗೆ ಪಾತ್ರವಾಗಿದ್ದು ಕೌಟುಂಬಿಕ ಹಾಕಿ ಉತ್ಸವ ಹಾಗೂ ಕೊಡಗಿನ ಕ್ರೀಡಾ ಹಿರಿಮೆಗೆ ಮತ್ತೊಂದು ಗರಿ ಮೂಡಿದ್ದು ಇದು ನಾಡಿನ ಸಮಸ್ತ ಜನತೆಗೆ ಸಂದ ಗೌರವಾಗಿದೆ ಎಂದು ತಿಳಿಸಿದರುಶಾಂತೆಯಂಡ ಕುಟುಂಬದ ಅಧ್ಯಕ್ಷರಾದ ಪಿ. ಬೋಪಯ್ಯ ,ಉಪಾಧ್ಯಕ್ಷ ಟಿ.ದೇವರಾಜ್ ಮತ್ತು ತಿಮ್ಮಯ್ಯಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.