ADVERTISEMENT

‘ವರದಿ ಪರಿಣಾಮ ತಿಳಿಸಲು ವಿಫಲ’

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 6:33 IST
Last Updated 13 ಏಪ್ರಿಲ್ 2017, 6:33 IST

ನಾಪೋಕ್ಲು: ಕಸ್ತೂರಿ ರಂಗನ್ ವರದಿ ಸಾಧಕ-ಬಾಧಕಗಳನ್ನು ಜನರಿಗೆ ತಿಳಿ ಸಲು ಜಿಲ್ಲಾಡಳಿತ ಮತ್ತು ಸರ್ಕಾರ ವಿಫಲ ಗೊಂಡಿದ್ದು ಒಟ್ಟಾರೆ ಸಮಸ್ಯೆ ಮತ್ತು ಗೊಂದಲಕ್ಕೆ ಕಾರಣವಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಗ್ರಾಮ ಪಂಚಾಯಿತಿಗೆ ಒಳಪಟ್ಟ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ದರು. ಗೋವಾದಲ್ಲಿ ನಡೆದ ಗ್ರೀನ್ ಬೆಂಚ್ ಕೇಸ್ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸದೇ ವಾದ ಮಂಡಿಸದಿರು ವುದು ಜನತೆಗ ವರದಿಯಿಂದ ಆತಂಕ ಪಡುವಂತಾಗಿದೆ ಎಂದು ಹೇಳಿದರು.

10 ಜಿಲ್ಲೆಗಳ 55 ಗ್ರಾಮಗಳಲ್ಲಿ ಸ್ವಾಭಾವಿಕ ಅರಣ್ಯ, ಪೈಸಾರಿ ಜಾಗ, ಖಾಸಗಿ ಜಾಗ ಗುರುತಿಸಿ ಗ್ರಾ.ಪಂ ಸಭೆ ಯಲ್ಲಿ ವರದಿಯ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಸಮಿತಿಯ ನಿರ್ಣಯ ವನ್ನು ಸರ್ಕಾರಕ್ಕೆ ಕಳುಹಿಸಬೇಕು ಎಂದು ಹೇಳಿದರು. ನಾಪೋಕ್ಲು ವಿಭಾಗದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಜಿಲ್ಲಾ, ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ₹ 74 ಲಕ್ಷ ಪ್ರಗತಿಯಲ್ಲಿದೆ. ಕಾಮಗಾರಿ ಮುಗಿದ ಯೋಜನೆಗಳನ್ನು ಶಾಸಕರು ಉದ್ಘಾಟಿಸಿದರು.

ADVERTISEMENT

ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಮ್ಮಯ್ಯ, ತಾ.ಪಂ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್, ಸದಸ್ಯರಾದ ಕೊಡಿ ಯಂಡ ಇಂದಿರಾ, ಎನ್.ಪಿ. ಉಮಾ ಪ್ರಭು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಅಪ್ಪ ಚೆಟ್ಟೋ ಳಂಡ ಮನು ಮುತ್ತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.