ADVERTISEMENT

ವಸತಿ ಕಲ್ಪಿಸದಿದ್ದರೆ ‘ಬೆಂಗಳೂರು ಚಲೋ’

​ಪ್ರಜಾವಾಣಿ ವಾರ್ತೆ
Published 13 ಮೇ 2017, 10:40 IST
Last Updated 13 ಮೇ 2017, 10:40 IST

ಮಡಿಕೇರಿ: ಜಿಲ್ಲೆಯ ಎಲ್ಲ ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸದಿದ್ದರೆ ‘ಬೆಂಗಳೂರು ಚಲೋ’ ಹಮ್ಮಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದ ಎದುರು ಪ್ರತಿಭಟಿಸಲಾಗುವುದು ಎಂದು ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಎಚ್ಚರಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ, ‘ದಿಡ್ಡಳ್ಳಿಯ ಆದಿವಾಸಿ ಗಳು ಸೌಲಭ್ಯ ವಂಚಿತರಾಗಲು ಜಿಲ್ಲಾ ಡಳಿತ ಹಾಗೂ ಸರ್ಕಾರದ ವಿಳಂಬ ನೀತಿ, ಕೆಲವು ಭೂಮಾಲೀಕರೇ ಕಾರಣ’ ಎಂದು ಆರೋಪಿಸಿದರು.

‘ನಿರಾಶ್ರಿತರಿಗೆ ವಸತಿ ನೀಡುವುದಾಗಿ ನಂಬಿಸಿ, ಬಸವನಹಳ್ಳಿ, ಬ್ಯಾಡಗುಟ್ಟದ ಬಯಲು ಪ್ರದೇಶಕ್ಕೆ ಕರೆದೊಯ್ದು ಬಿಡ ಲಾಗಿದೆ. ಮಳೆ, ಚಳಿಯಲ್ಲಿ ನಿರಾಶ್ರಿತರು ಬಯಲು ಪ್ರದೇಶದಲ್ಲಿ ಕಾಲ ಕಳೆಯುತ್ತಿ ದ್ದಾರೆ’ ಎಂದು ದೂರಿದರು.

ADVERTISEMENT

‘ದಿಡ್ಡಳ್ಳಿಯ ಅರಣ್ಯ ಪ್ರದೇಶವೇ ಅಥವಾ ಕಂದಾಯ ಭೂಮಿಯೇ ಎಂಬ ವರದಿಯನ್ನು ಜಿಲ್ಲಾಡಳಿತ ಇನ್ನೂ ನೀಡಿಲ್ಲ. ವರದಿಗೆ ಮೊದಲೇ ಜಿಲ್ಲಾಡಳಿತ ಎಲ್ಲರನ್ನೂ ಸ್ಥಳಾಂತರಿಸಿರುವುದು ಜೀವ ವಿರೋಧಿ ಕ್ರಮ’ ಎಂದು ಆಪಾದಿಸಿದರು. 

ಕಮಲ, ಕಾಂಗ್ರೆಸ್ಸಿಗರ ಕೈವಾಡ: ‘ಕಮಲ ಕಾಂಗ್ರೆಸ್ಸಿಗರ ಕೈವಾಡದಿಂದ ಆದಿವಾಸಿಗಳು ಜಿಲ್ಲೆಯಲ್ಲಿ ಬದುಕಲು ಆಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಸುಬ್ಬಯ್ಯ ದೂರಿದರು. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗುಟ್ಟದಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಿರಾಶ್ರಿತರಿಗೆ ನಿವೇ ಶನ ಗುರುತಿಸುವ ಕ್ರಮ ಖಂಡ ನೀಯ. ಎಲ್ಲಾ ನಿರಾಶ್ರಿತರಿಗೆ ಆದ್ಯತೆ ಮೇರೆಗೆ ಭೂಮಿ ನೀಡಬೇಕು.

ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದವರು ಭೂಮಿ ನೀಡಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಅದ್ಯಕ್ಷ ಕೆ. ನಿರ್ವಾಣಪ್ಪ, ಮುಖಂಡರಾದ ಅಮೀನ್ ಮೊಹಿಸಿನ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.