ADVERTISEMENT

ಸಹಕಾರ ಸಂಘದಲ್ಲಿ ವ್ಯವಹರಿಸಿ

ಮಾಯಮುಡಿ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮು ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 9:11 IST
Last Updated 2 ಮಾರ್ಚ್ 2017, 9:11 IST

ಗೋಣಿಕೊಪ್ಪಲು:  ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ವ್ಯವಹಾರ ನಡೆಸುವಂತೆ ಎಂದು ಶಾಸಕ ಕೆ.ಜಿ.ಬೋಪಯ್ಯ ಬುಧವಾರ ಹೇಳಿದರು.

ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ  ₹ 60 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಗೋದಾಮು ಮತ್ತು ಸಭಾಂಗಣ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಥಮಿಕ ಸಹಕಾರ ಸಂಘ ಬೆಳವಣಿಗೆಗೆ ರೈತರು ಕೈ ಜೋಡಿಸಬೇಕು. ಹಿರಿಯರು ಹಾಕಿಕೊಟ್ಟ ಸಂಘದ ಅಡಿಪಾಯವನ್ನು ಮತ್ತಷ್ಟು ಬಲಗೊಳಿಸಿ ಎಂದು ಹೇಳಿದರು.

ಅಪೆಕ್ಸ್ ಬ್ಯಾಂಕ್ ಮತ್ತು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ ಯುವ ಸಮುದಾಯ ಸಹಕಾರ ಸಂಘದ ಸದಸ್ಯತ್ವ ಪಡೆದುಕೊಂಡು ಸಂಘದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನುಡಿದರು. ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡಿರ ಎಂ.ಅಪ್ಪಯ್ಯ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಮಾಜಿ ಅಧ್ಯಕ್ಷರಾದ  ಅಧ್ಯಕ್ಷರಾದ ಟಿ.ಎಸ್. ಕೃಷ್ಣಮೂತರ್ತಿ, ಕಾಳಪಂಡ ಸುದೀರ್, ಚೆಪ್ಪುಡಿರ ಪಿ.ಅಚ್ಚಯ್ಯ, ಕಾಳಪಂಡ ಟಿಪ್ಪು ಬಿದ್ದಪ್ಪ, ಚೆಪ್ಪುಡಿರ ಎಸ್. ತಿಮ್ಮಯ್ಯ, ಶಿವಚಾರರ ಎಸ್. ಸುರೇಶ್ ಅವರನ್ನು ಸನ್ಮಾನಿಸಲಾಯಿತು.

ಸಹಕಾರ ಸಂಘದ ಉಪನಿಬಂಧಕ ಜಿ.ಆರ್.ವಿಜಯ್ ಕುಮಾರ್, ವಿಧಾನಪರಿಷತ್ ಮಾಜಿ  ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ, ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್.ಮೋಹನ್, ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಎಂ.ಭವಾನಿ, ಸಂಘದ ಉಪಾಧ್ಯಕ್ಷ ಪುಚ್ಚಿಮಾಡ ಎಂ.ಶಿಲ್ಪ, ನಿರ್ದೇಶಕರಾದ  ಮಲ್ಲೇಂಗಡ ಎಂ. ಪೂಣಚ್ಚ, ನಾಮೇರ ವಿಶ್ವನಾಥ್, ಆಪಟ್ಟೀರ ಎಸ್. ನಾಚಯ್ಯ, ಬಲ್ಯಂಡ ಎಸ್. ಪ್ರತಾಪ್, ಶಿವಚಾರರ ವಿ. ಮಂಜುನಾಥ್, ಬಲ್ಯಂಡ ಪಿ. ದೇವಕ್ಕಿ, ಪಂಜರಿಯರವರ ಚಂದಾ, ಕುಂಬಾರರ ವೈ, ಅಶ್ವಥ್, ಕೊಂಗಂಡ ಎಂ. ಗಣಪತಿ, ಕಾಳಪಂಡ ಸಿ. ನರೇಂದ್ರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತಂಗಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.