ADVERTISEMENT

ಕ್ರೀಡೆ ನಿತ್ಯ ಜೀವನದ ಭಾಗವಾಗಲಿ

ಉಚಿತ ಬಾಸ್ಕೆಟ್‌ಬಾಲ್ ತರಬೇತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 4:38 IST
Last Updated 10 ಏಪ್ರಿಲ್ 2017, 4:38 IST

ಕೋಲಾರ: ‘ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ದೈಹಿಕ ವಾಗಿ, ಮಾನಸಿಕವಾಗಿ ಆರೋಗ್ಯವಂ ತರಾಗಿರಲು ಸಾಧ್ಯವಾಗುತ್ತದೆ’ ಎಂದು ಕನಕ ಬಾಸ್ಕೆಟ್ ಬಾಲ್ ಕ್ಲಬ್‌ ಅಧ್ಯಕ್ಷ ನಾಗರಾಜ್ ತಿಳಿಸಿದರು.

ನಗರದ ಕಠಾರೀಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕನಕ ಬಾಸ್ಕೆಟ್‌ ಬಾಲ್ ಕ್ಲಬ್‌ನಿಂದ ಭಾನುವಾರ ಆರಂಭವಾದ ಉಚಿತ ಕ್ರೀಡಾ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.‘ಕ್ರೀಡೆ ನಿತ್ಯ ಜೀವನದ ಭಾಗವಾಗಬೇಕು. ಪ್ರತಿಯೊಬ್ಬರು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಪಡೆದುಕೊಳ್ಳಬಹುದು’ ಎಂದು ಸಲಹೆ ನೀಡಿದರು.

‘ಪೋಷಕರು ದಿನವೀಡಿ ಮಕ್ಕಳನ್ನು ಓದುವಂತೆ ಒತ್ತಡ ಹಾಕುವ ಬದಲು ಸ್ವಲ್ಪ ಸಮಯ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿ ಕೊಡಬೇಕು. ಇತ್ತೀಚಿನ ದಿನಗಳಲ್ಲಿ ಬಾಸ್ಕೆಟ್ ಬಾಲ್ ತನ್ನದೆ ಆದ ಪ್ರಾಮುಖ್ಯ ಪಡೆದುಕೊಂಡಿದೆ’ ಎಂದರು. 

‘ಈ ಹಿಂದೆ ಇಂತಹ ಶಿಬಿರಗಳು ನಡೆಯುತ್ತಿರಲಿಲ್ಲ. ಆದರೆ ಈಗಿನ ದಿನಗಳಲ್ಲಿ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತಿದ್ದು ಪ್ರತಿ ಯೊಬ್ಬರು ಇದರ ಪ್ರಯೋಜನ ಪಡೆದು ಕೊಳ್ಳುವಂತಾಗಬೇಕು ಎಂದರು.

‘ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಅನೇಕ ಲಾಭಗಳು ಇವೆ. ಅವುಗಳ ಬಗ್ಗೆ ತರಬೇತುದಾರರ ಬಳಿ ಮಾಹಿತಿ ಪಡೆದುಕೊಳ್ಳಲು ಮುಂದಾಗಬೇಕು. ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಪೋಷಕರು ಉತ್ತೇಜಿಸಬೇಕು’ ಎಂದು ಮನವಿ ಮಾಡಿದರು.

ತರಬೇತುದಾರ ತ್ಯಾಗರಾಜ್ ಮಾತನಾಡಿ, ‘ನಿತ್ಯ ಕ್ರೀಡೆಯಲ್ಲಿ ಪಾಲ್ಗೊ ಳ್ಳುವುದರಿಂದ ಆರೋಗ್ಯವತರಾಗಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ನಗರಸಭೆ ಸದಸ್ಯ ಮಂಜುನಾಥ್, ಸುವರ್ಣ ಸೆಂಟ್ರಲ್ ಶಾಲೆ ಕಾರ್ಯದರ್ಶಿ ಹರಿಪ್ರಸಾದ್, ಮಧರ್ ಥೆರೆಸಾ ವಿದ್ಯಾ ಸಂಸ್ಥೆ ಅಧ್ಯಕ್ಷ ಶ್ರೀಕೃಷ್ಣ, ಕಾರ್ಯದರ್ಶಿ ಆಂಚೆ ಅಶ್ವತ್ಥ್, ತರಬೇತುದಾರರಾದ ನಾಗೇಶ್, ಮುದ್ದುರಾಜ್, ರಾಜೇಂದ್ರ ಪ್ರಸಾದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.