ADVERTISEMENT

ನಾಳೆ ಕರಿಕೆಯಲ್ಲಿ ಕನ್ನಡ ಜಾತ್ರೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 7:05 IST
Last Updated 29 ಡಿಸೆಂಬರ್ 2017, 7:05 IST
ಸಮ್ಮೇಳನದ ಲಾಂಛನ
ಸಮ್ಮೇಳನದ ಲಾಂಛನ   

ಮಡಿಕೇರಿ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿ. 30ರಂದು ಕರಿಕೆ ಗ್ರಾಮದಲ್ಲಿ ನಡೆಯಲಿದೆ ಎಂದು ಪರಿಷತ್‌ನ ಜಿಲ್ಲಾ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 8ಕ್ಕೆ ಪಿಎಸ್‌ಐ ಸದಾಶಿವಯ್ಯ ರಾಷ್ಟ್ರ ಧ್ವಜಾರೋಹಣ ನೇರವೇರಿಸಿದರೆ, ಕನ್ನಡ ಧ್ವಜಾರೋಹಣವನ್ನು ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ನೆರವೇರಿಸಲಿದ್ದಾರೆ ಎಂದರು.

ಕುಡೆಕಲ್ ಸಂತೋಷ್ ಮಾತನಾಡಿ, ಬೆಳಿಗ್ಗೆ 8.30ಕ್ಕೆ ಪದ್ಮನಾಭ ಸರಳಾಯ ದ್ವಾರದ ಉದ್ಘಾಟನೆಯನ್ನು ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಲಿ, ಕಾಟೂರು ನಾರಾಯಣ ನಂಬಿಯಾರ್ ದ್ವಾರವನ್ನು ಕರಿಕೆ ಗ್ರಾಮ ಪಂಚಾಯಿತಿ ಸದಸ್ಯೆ ಎಂ.ಎಚ್. ಆಯಿಷಾ, ಡಾ.ಬೇಕಲ್ ಸೋಮನಾಥ್ ದ್ವಾರವನ್ನು ಉಷಾಕುಮಾರಿ ನೆರವೇರಿಸಲಿದ್ದಾರೆ. ನಂತರ, ಬೆಳಗ್ಗೆ 9ಕ್ಕೆ ಸಮ್ಮೇಳನದ ಅಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರನ್ನು ತೆರೆದ ವಾಹನದಲ್ಲಿ ವೇದಿಕೆ ಕರೆ ತರಲಾಗುವುದು. ಮೆರವಣಿಗೆಗೆ ತಹಶೀಲ್ದಾರ್ ಕುಸುಮಾ ಚಾಲನೆ ನೀಡುವರು ಎಂದು ಮಾಹಿತಿ ನೀಡಿದರು.

ADVERTISEMENT

ಬೆಳಿಗ್ಗೆ 10ಕ್ಕೆ ‘ಕೋಡಿ ರಾಘವಯ್ಯ ಪುಸ್ತಕ ಮಳಿಗೆ’ ಉದ್ಘಾಟನೆಯನ್ನು ಮಡಿಕೇರಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಸಂದ್ಯಾ ನೆರವೇರಿಸಲಿದ್ದಾರೆ. ನಂತರ 11ಕ್ಕೆ ಸಮ್ಮೇಳನದ ಉದ್ಘಾಟನೆಯನ್ನು ಶಾಸಕ ಕೆ.ಜಿ.ಬೋಪಯ್ಯ ನೆರವೇರಿಸಲಿದ್ದು, ನಿಕಟ ಪೂರ್ವ ಅಧ್ಯಕ್ಷ ಬಿ.ಎ. ಷಂಶುದ್ದೀನ್, ಪ್ರೊ.ಎ.ವಿ. ನಾವಡ, ಮೊಣ್ಣಂಡ ಶೋಭಾ ಸುಬ್ಬಯ್ಯ, ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಮಧ್ಯಾಹ್ನ 12ಕ್ಕೆ ನಡೆಯುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಕೋರನ ಸರಸ್ವತಿ ವಹಿಸಲಿದ್ದಾರೆ. ‘ಕನ್ನಡ ಸಾಹಿತ್ಯದ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ’ ಕುರಿತು ಪತ್ರಕರ್ತ ಕೆ.ಬಿ. ಮಂಜುನಾಥ್, ‘ಕನ್ನಡಕ್ಕೆ ಅನ್ಯ ಭಾಷೆ– ಭಾಷಿಕರ ಕೊಡುಗೆ’ ಕುರಿತು ಪಟ್ಟಡ ಶಿವಕುಮಾರ್, ಗಡಿಭಾಗದಲ್ಲಿ ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು’ ಕುರಿತು ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ವಿಚಾರ ಮಂಡಿಸುವರು ಎಂದು ಹೇಳಿದರು.

ಸನ್ಮಾನ ಕಾರ್ಯಕ್ರಮ: ಸಾಹಿತ್ಯ ಕ್ಷೇತ್ರದಲ್ಲಿ ಆರ್. ವಿದ್ಯಾಧರ, ಕ್ರೀಡಾ ಕ್ಷೇತ್ರದಲ್ಲಿ ಲಕ್ಷಣ್ ಸಿಂಗ್, ಸಮಾಜ ಸೇವೆಯಲ್ಲಿ ಕುದುಕುಳಿ ಭರತ್, ಮಾಧ್ಯಮ ಕ್ಷೇತ್ರದಿಂದ ಕುಯ್ಯಮುಡಿ ಸುನಿಲ್, ಶಿಕ್ಷಣ ಕ್ಷೇತ್ರದಿಂದ ಚೌರೀರ ಉದಯ, ಜನಪದ ಕ್ಷೇತ್ರದಿಂದ ತೆನೆಗುಂಡಿ ಚಾಣೆ, ನಾಟಿ ವೈದ್ಯರಾದ ಪರಿಚನ ಲಕ್ಷಣ್, ಕೃಷಿ ಕ್ಷೇತ್ರದಿಂದ ಪ್ರೇಮಾ ಆಚಾರ್, ನೃತ್ಯ ವಿಭಾಗದಿಂದ ಭಾರತಿ ರಮೇಶ್, ವಾದ್ಯ ವಿಭಾಗದಿಂದ ಸಂಗೀತ ಮಣಿ, ರಂಗಭೂಮಿಯಿಂದ ಬಲ್ಯಮೀದೇರಿರ ಸುಬ್ರಮಣಿ, ಕಲೆ ವಿಭಾಗದಿಂದ ಕೋಡಿ ಭರತ್, ಯುವ ಪ್ರತಿಭೆ ಹಿಮಾ ಜಾರ್ಜ್‌ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಅದೇ ದಿನ ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪರಿಷತ್‌ನ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ಗೌರವ ಕೋಶಾಧ್ಯಕ್ಷ ಬಾಳಕಜೆ ಯೋಗೇಂದ್ರ, ನಿರ್ದೇಶಕಿ ಕೇಕಡ ಇಂದುಮತಿ ಇದ್ದರು.

ಕವಿಗೋಷ್ಠಿ

ಸಾಹಿತ್ಯ ಸಮ್ಮೇಳನದಲ್ಲಿ ಮಧ್ಯಾಹ್ನ 2ಕ್ಕೆ ಕವಯತ್ರಿ ಡಾ.ಸಿ.ಪಿ. ಲಾವಣ್ಯಾ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಅಂದು ಕಿಶೋರ್‌ ರೈ, ವಿ.ಜೆ. ಮೌನ, ಕಡ್ಲೇರ ಜಯಲಕ್ಷ್ಮಿ ಮೋಹನ್, ರಾಘವೇಂದ್ರ ಸುರೇಶ್, ಎಸ್.ಆರ್. ಶಶಿಕಿರಣ್, ಆರ್. ಜಯನಾಯಕ್, ಶೈಲಜಾ ದಿನೇಶ್, ರಾಘವೇಂದ್ರ, ಪ್ರಶಾಂತ್‌ ಸಿ. ನಾಯಕ್, ಎ.ಎಸ್. ಕಾವ್ಯಾ, ಎಂ.ವಿ. ದರ್ಶನ್ ಕವನ ವಾಚಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.