ADVERTISEMENT

ಬಡ್ತಿ ಮೀಸಲಾತಿ ರಕ್ಷಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 4:53 IST
Last Updated 24 ಮಾರ್ಚ್ 2017, 4:53 IST

ಮುಳಬಾಗಿಲು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಬಡ್ತಿ ಮೀಸಲಾತಿ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಮುಖಂಡ ಆವಣಿ ಹೆಚ್.ಆನಂದ್ ಮಾತನಾಡಿ, ಕಳೆದ ಫೆಬ್ರವರಿ 9ರಂದು ಎಸ್‌ಸಿ, ಎಸ್‌ಟಿ ನೌಕರರಿಗೆ ನೀಡಿದ ಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿರುವುದು ಸರಿಯಲ್ಲ ಎಂದು ದೂರಿದರು.

ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಬಿ.ಎನ್.ನಾರಾಯಣಸ್ವಾಮಿ ಮಾತನಾಡಿ, ಸುಪ್ರೀಂಕೋರ್ಟ್‌ನಲ್ಲಿ ಎಸ್‌ಸಿ, ಎಸ್‌ಟಿ ನೌಕರರಿಗೆ ಸಂವಿಧಾನ ಬದ್ಧವಾಗಿ ನ್ಯಾಯ ಒದಗಿಸಬೇಕು. ಸಂಸತ್ತಿನಲ್ಲಿ ಬಡ್ತಿ  ಮೀಸಲಾತಿ ವಿಷಯವನ್ನು ಮಂಡಿಸಬೇಕು. ಮೀಸಲಾತಿಗೆ ನಿಗದಿಪಡಿಸಿರುವ ಶೇ 50 ರಷ್ಟು ಮೀಸಲಾತಿಯನ್ನು ಎಲ್ಲಾ ಹಿಂದುಳಿದ ವರ್ಗಗಳ ಅರ್ಹರಿಗೆ ಜನಸಂಖ್ಯೆ ಅನುಪಾತದಲ್ಲಿ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಎಸ್‌ಸಿ ಎಸ್‌ಟಿ ನೌಕರರ ಸಂಘದ ಖಜಾಂಚಿ ಕೆ.ಬಿ.ನಾಗರಾಜು, ಪ್ರಧಾನ ಕಾರ್ಯದರ್ಶಿ ಎಂ.ಶಂಕರ್, ಮುಖ್ಯ ಶಿಕ್ಷಕರಾದ ಎಂ.ನಾರಾಯಣಮ್ಮ, ಆರ್.ವಿ.ಚಂದ್ರು, ಸಂತೋಷಮ್ಮ, ಆನಂದ್, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ಬರಾಯಪ್ಪ, ಶಿಕ್ಷಕರ ಸಂಘದ ಗೌರವಾಧ್ಯಕ್ಷ ಆವನಿ ಎಚ್.ಆನಂದ್, ಉಪ ತಹಶೀಲ್ದಾರ್ ಬಿ.ಸುಬ್ರಮಣಿ, ಗಂಗಪ್ಪ, ಕೀಲುಹೊಳಲಿ ಕೃಷ್ಣಪ್ಪ, ಬೆಸ್ಕಾಂ ಎಇ ರಮೇಶ್, ಎಚ್.ವಿ.ಶ್ರೀನಿವಾಸ್, ಎಂ.ವಿ.ಶ್ರೀನಾಥ್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಹೆಚ್.ಕೆ.ಮೋಹನ್‌ಬಾಬು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.