ADVERTISEMENT

ಮಳೆಗೆ ಚಿಗುರಿದ ಹಸಿರು ಮೇವು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 7:27 IST
Last Updated 10 ಸೆಪ್ಟೆಂಬರ್ 2017, 7:27 IST
ಮುಳಬಾಗಿಲು ತಾಲ್ಲೂಕಿನ ಮೇಲ್‍ತಾಐಲೂರು ಗ್ರಾಮದ ರೈತ ಹೊಲವೊಂದರಲ್ಲಿ ಜೋಳದ ಬಿತ್ತನೆ ಮಾಡಿದ್ದು ಮೊಳಕೆ ಹೊಡೆದಿರುವುದು.
ಮುಳಬಾಗಿಲು ತಾಲ್ಲೂಕಿನ ಮೇಲ್‍ತಾಐಲೂರು ಗ್ರಾಮದ ರೈತ ಹೊಲವೊಂದರಲ್ಲಿ ಜೋಳದ ಬಿತ್ತನೆ ಮಾಡಿದ್ದು ಮೊಳಕೆ ಹೊಡೆದಿರುವುದು.   

ಮುಳಬಾಗಿಲು: ತಾಲ್ಲೂಕಿನ ಎಲ್ಲೆಡೆ ಇತ್ತೀಚೆಗೆ ಸುರಿದ ಮಳೆಗೆ ಚಿಗುರು ಮೇವು ಮೂಡಿದೆ. ರೈತರು ಮತ್ತು ಕುರಿಗಾಹಿಗಳು ಸಂತಸಗೊಂಡಿದ್ದಾರೆ. ಬಯಲು, ಹೊಲ ಗದ್ದೆಗಳ ಬಳಿ ಹಸಿರು ಮೇವು ಬೆಳೆದಿದೆ. ಬೀಡು ಪ್ರದೇಶ, ಅರಣ್ಯ ಪ್ರದೇಶ ಸೇರಿದಂತೆ ಹೊಲ ಗದ್ದೆಗಳಲ್ಲಿಯೂ ಮೇವು ಚಿಗುರಿದೆ.‌ಈ ಹಿಂದೆ ಜಾನುವಾರುಗಳಿಗೆ ಅರಳಿ ಮರದ ಸೊಪ್ಪನ್ನು ಕಟಾವು ಮಾಡಿ ನೀಡಲಾಗುತ್ತಿತ್ತು.

‘ಎಳೆ ಕುರಿ ಮರಿಗಳಿಗೆ ಹೊಲಗಳಲ್ಲಿ ಬೆಳೆದಿರುವ ಗರಿಕೆ ಹುಲ್ಲಿನಿಂದ ಉತ್ತಮ ಆಹಾರ ಸಿಕ್ಕಿದೆ. ಕುರಿಗಳು ಸಮರ್ಪಕವಾಗಿ ಬೆಳವಣಿಯಾಗಲಿವೆ’ ಎಂದು ಕುರಿಗಾಹಿ ಶೆಟ್ಟಿ ಬನಕನಹಳ್ಳಿ ನಾಗರಾಜ್ ಹೇಳಿದರು. ಈಗಾಗಲೇ ಬಿತ್ತನೆ ಮಾಡಿರುವ ರಾಗಿ, ನೆಲಗಡಲೆ ಬೆಳಗಳು ಮಳೆಯಿಂದ ಚೇತರಿಕೆ ಕಾಣುತ್ತಿವೆ. ಉತ್ತಮ ಇಳುವರಿ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT