ADVERTISEMENT

ವಯಸ್ಸು ಅರಿತು ವಿವಾಹಕ್ಕೆ ಮುಂದಾಗಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 10:37 IST
Last Updated 11 ಏಪ್ರಿಲ್ 2017, 10:37 IST

ಮುಳಬಾಗಿಲು: ‘ಪೋಷಕರು ಮಕ್ಕಳ ವಯಸ್ಸು ಅರಿತು ವಿವಾಹಕ್ಕೆ ಮುಂದಾಗ ಬೇಕು. ಇಲ್ಲವಾದರೆ ಜೀವನದಲ್ಲಿ ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ’ ಎಂದು ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಎಸ್.ಶ್ರೀಧರ ತಿಳಿಸಿದರು.

ನಗರದ ಸಿವಿಲ್ ನ್ಯಾಯಾಲಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಮತ್ತು ತಾಲ್ಲೂಕು ಆಡಳಿತ  ಸೋಮವಾರ ಹಮ್ಮಿಕೊಂಡಿದ್ದ ‘ಬಾಲ್ಯವಿವಾಹ ತಡೆ ಹಾಗೂ ಶಾಲೆ ಕಡೆ ನನ್ನ ನಡೆ’ ಕುರಿತ ಜಾಗೃತಿ ಆಂದೋಲನ ಉದ್ಘಾಟಿಸಿ ಮಾತನಾಡಿದರು.

‘ತಾಲ್ಲೂಕಿನ ಗ್ರಾಮೀಣ ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ವಿವಾಹ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. 18 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ವಿವಾಹ ಮಾಡುವುದು ಕಾನೂನು ರೀತಿ ಅಪರಾಧ. ಆದ್ದರಿಂದ ಸಾರ್ವಜನಿಕರು ಬಾಲ್ಯ ವಿವಾಹ ತಡೆಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಪ್ರಧಾನ ಸಿವಿಲ್ ನ್ಯಾಯಾಧೀಶ ಎ.ಎ.ಶಫೀರ್, ‘ಚಿಕ್ಕ ವಯಸ್ಸಿನಲ್ಲಿ ವಿವಾಹವಾಗಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಹೆಣ್ಣು ಮಕ್ಕಳು ಸಾಕಷ್ಟು ಮಂದಿ ಇದ್ದಾರೆ.  ಬಾಲ್ಯ ವಿವಾಹ ತಡೆಗೆ ಸಹಕರಿಸಬೇಕು’ ಎಂದು ಕೋರಿದರು.

ನ್ಯಾಯಾಲಯ ಆವರಣದಿಂದ ಪ್ರಾರಂಭಗೊಂಡ ಜಾಗೃತಿ ಜಾಥಾ ಕೆಇಬಿ ವೃತ್ತ, ಬಜಾರು ಬೀದಿ, ಅಂಬೇಡ್ಕರ್ ವೃತ್ತ, ಗುಣಿಗಂಟಿಪಾಳ್ಯ ವೃತ್ತ, ಸೋಮೇಶ್ವಪಾಳ್ಯ, ಶ್ರೀನಿವಾಸಪುರ ರಸ್ತೆ ಗಳಲ್ಲಿ ಸಾಗಿತು. ಸಾರ್ವಜನಿಕರಿಗೆ ಬಾಲ್ಯ ವಿವಾಹ ತಡೆ ಕುರಿತು ಕರಪತ್ರ ವಿತರಿಸಲಾಯಿತು.

ನ್ಯಾಯಾಧೀಶ ಎಚ್.ಪಿ.ಮೋಹನ್‌ ಕುಮಾರ್, ಬಿಇಒ ಎನ್.ದೇವರಾಜ್, ವಕೀಲ ಎಂ.ಎಸ್.ಶ್ರೀನಿವಾಸರೆಡ್ಡಿ ಮಾತ ನಾಡಿದರು. ಸರ್ಕಾರಿ ಸಹಾಯಕ ಅಭಿ ಯೋಜಕ ಶಿವಲಿಂಗಪ್ಪ ಹೂಗಾರ್, ಗ್ರಾಮಾಂತರ ಪೊಲೀಸ್ ಠಾಣೆ ಸಬ್‌ಇಸ್ಪೆಕ್ಟರ್ ಬಿ.ಟಿ.ಗೋವಿಂದು, ಸಿಡಿಪಿಒ ಇಲಾಖೆ ಅಧಿಕಾರಿಗಳಾದ ವಿಜಿ ಯಮ್ಮ, ಅಮೃತ, ವಕೀಲರ ಸಂಘದ ಅಧ್ಯಕ್ಷ ತಿಮ್ಮರಾಯಪ್ಪ, ಕಾರ್ಯದರ್ಶಿ ಪಿ.ನಟರಾಜ್,   ಎಸ್.ಬಷೀರ್ ಅಹ ಮದ್,  ಅಂಗನವಾಡಿ ಕಾರ್ಯಕರ್ತೆ ಯರು,  ಶಿಕ್ಷಕಿಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.