ADVERTISEMENT

ಶಿಕ್ಷಕರು ನಿತ್ಯ ಅಭ್ಯಾಸದಲ್ಲಿ ತೊಡಗಲಿ

ಎಂಡೋವರ್ ಇಂಟರ್ ನ್ಯಾಷನಲ್ ಶಾಲೆ ವಾರ್ಷಿಕೋತ್ಸವ: ಮಕ್ಕಳ ಸಾಂಸ್ಕೃತಿಕ ಕಲರವ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 12:12 IST
Last Updated 13 ಫೆಬ್ರುವರಿ 2017, 12:12 IST
‘ಕಲಾ ಸೌರಭ’ ಕಾರ್ಯಕ್ರಮದಲ್ಲಿ ಮಕ್ಕಳು  ಸಾಂಸ್ಕೃತಿಕ ಪ್ರದರ್ಶನ ಮನಸೆಳೆಯಿತು.
‘ಕಲಾ ಸೌರಭ’ ಕಾರ್ಯಕ್ರಮದಲ್ಲಿ ಮಕ್ಕಳು ಸಾಂಸ್ಕೃತಿಕ ಪ್ರದರ್ಶನ ಮನಸೆಳೆಯಿತು.   

ಮಾಲೂರು: ‘ಮಕ್ಕಳಲ್ಲಿ ಜ್ಞಾನ, ಸಂಪತ್ತು ಬೆಳೆಸಲು ಶಿಕ್ಷಕರು ನಿತ್ಯ ಅಭ್ಯಾಸದಲ್ಲಿ ತೊಡಗಿರಬೇಕು’ ಎಂದು ಕೋಡಿಮಠದ ಡಾ.ಶಿವಾನಂದಾ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಮುಗಳೂರಿನ ಎಂಡೋ ವರ್ ಇಂಟರ್ ನ್ಯಾಷನಲ್ ಶಾಲೆ ವಾರ್ಷಿ ಕೋತ್ಸವದ ಅಂಗವಾಗಿ ಭಾನುವಾರ ನಡೆದ ಎಂಡೋವರ್ ಕಲಾ ಸೌರಭ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

‘ಜೀವನದಲ್ಲಿ ವಿದ್ಯೆಯೇ ಸರ್ವಸ್ವ. ವಿದ್ಯೆ ದಾನಕ್ಕಿಂತ ದೊಡ್ಡದು ಯಾವುದು ಇಲ್ಲ. ವಿದ್ಯೆ ಮನುಷ್ಯನ ವಿಕಾಸವನ್ನು ಹೆಚ್ಚಿಸುವ ಮೂಲಕ ಮನುಷ್ಯನಾಗಿ ಬಾಳುವಂತೆ ಮಾಡುತ್ತದೆ’ ಎಂದರು. ‘ಶಿಕ್ಷಣಕ್ಕೆ ಜಾತಿ, ಮತದ ತಾರತಮ್ಯ ಇಲ್ಲ. ವಿದ್ಯೆ ಜೊತೆಗೆ ವಿನಯವೂ ಇದ್ದರೆ ಭೂಷಣ. ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ವಾಗಿರುವುದು ಶಿಕ್ಷಣ. ವಿದ್ಯೆಯನ್ನು ಮಾರಲು ಅಥವಾ ಅಡವಿಡಲು ಸಾಧ್ಯವಿಲ್ಲ’ ಎಂದು ಹೇಳಿದರು. 

‘ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಸ್ತ್ರೀ ಸ್ವಾತಂ ತ್ರ್ಯದ ಅಂಬೇಡ್ಕರ್ ಚಿಂತನೆ ಸಾರ್ವ ಕಾಲಿಕ. ವಿದ್ಯಾರ್ಥಿಗಳಿಗೆ ಪ್ರಾರಂಭದಲ್ಲಿ ಮನೆ ಮತ್ತು ಶಾಲೆಗಳಲ್ಲಿ ಶಿಕ್ಷಣ ದೊರೆ ತಾಗ  ಉತ್ತಮ ಸಾಧಕರಾಗಲು ಸಾಧ್ಯ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಆನೇಕಲ್ ಶಾಸಕ ಬಿ. ಶಿವಣ್ಣ, ‘ಮಕ್ಕಳು ಬಾಲ್ಯದಲ್ಲೇ ಸಾಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಾಯಕತ್ವದ ಗುಣ ದೊಂದಿಗೆ ಸ್ವಾಭಿಮಾನದ ಗುಣವು ಬೆಳೆ ದಾಗ ಸಾಧಕರಾಗಲು ಸಾಧ್ಯ’ ಎಂದರು. ‘ಇಂದಿನ ದಿನಗಳಲ್ಲಿ ಯಾಂತ್ರಿಕರಣ ದಿಂದ ಕೆಲಸ ಕಾರ್ಯಗಳು ನಡೆಯುತ್ತಿವೆ. ಸಮಯದ ಉಳಿಕೆಯಾಗುತ್ತಿದೆ. ಈ ಉಳಿಕೆ ಸಮಯವನ್ನು ಸದ್ಬಳಕೆಗೆ ಬಳಸಬೇಕು. ಇದರಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.

‘ಎಂಡೋವರ್ ಇಂಟರ್ ನ್ಯಾಷನಲ್ ಶಾಲೆ ಮುಂಭಾಗದ ರಸ್ತೆ ದುರಸ್ತಿ ಹಾಗೂ ಡಾಂಬರ್ ಹಾಕಲು   ಸರ್ಕಾರ ಈಗಾಗಲೇ ₹ 2 ಕೋಟಿ ಬಿಡುಗಡೆ ಮಾಡಿದೆ’ ಎಂದು ಅವರು ಹೇಳಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿತ್ತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಚಿತ್ರನಟ ರಮೇಶ್ ಭಟ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ನಾರಾಯಣ ಸ್ವಾಮಿ, ಬೆಂಗಳೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ನಾಗ ರಾಜ್, ಮುಖಂಡರಾದ ಸ್ವಾತೇಗೌಡ,  ಡಾ.ರತ್ನ ಕುಮಾರಿ, ಗ್ರಾ.ಪಂ.ಅಧ್ಯಕ್ಷ ಮುರುಗೇಶ್, ನಾಗರಾಜ್ ಶಾಸ್ತ್ರೀ,  ನಿರ್ದೇಶಕ ವೇಮಪಲ್ಲಿ ಬಾವುಜಿ, ಶಾಲೆ ವ್ಯವಸ್ಥಾಪಕ ಎಂ.ಎಲ್. ಶಿವ ಶಂಕರ್, ಮುಖ್ಯ ಶಿಕ್ಷಕ ಜಿ.ವಿ.ಮುನೇಂದ್ರ ಮತ್ತಿತರರು ಭಾಗವಹಿಸಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.