ADVERTISEMENT

ಸ್ವಾವಲಂಬನೆಗೊಳಿಸುವುದೇ ನೈಜ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 12:45 IST
Last Updated 13 ಫೆಬ್ರುವರಿ 2017, 12:45 IST
ಮಾಲೂರು ತಾಲ್ಲೂಕಿನ ಚಿಕ್ಕ ತಿರುಪತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ನೃತ್ಯ ಪ್ರದರ್ಶನ
ಮಾಲೂರು ತಾಲ್ಲೂಕಿನ ಚಿಕ್ಕ ತಿರುಪತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ನೃತ್ಯ ಪ್ರದರ್ಶನ   

ಮಾಲೂರು : ‘ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಬಲಗೊಳಿಸುವ, ಬುದ್ಧಿಯನ್ನು ವಿಕಾಸಗೊಳಿಸುವ ಹಾಗೂ ಸ್ವಾಲಂಬಿಗೊಳಿಸುವುದೇ ನಿಜವಾದ ಶಿಕ್ಷಣ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ವಿ.ನಾಗೇಶ್ ತಿಳಿಸಿದರು.

ತಾಲ್ಲೂಕಿನ ಚಿಕ್ಕ ತಿರುಪತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಚಿಕ್ಕತಿರುಪತಿ ಸರ್ಕಾರಿ ಶಾಲೆಯಲ್ಲಿ ಪಂಚಮುಖಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಅಂದರೆ, ಯೋಗ, ಸಂಸ್ಕೃತ, ಸಂಗೀತ, ಶಾರೀರಿಕ, ಮೌಲ್ಯ ಶಿಕ್ಷಣ ಹೀಗೆ ಎಲ್ಲಚಟುವಟಿಕೆಗಳು ಪಂಚಮುಖಿ ಶಿಕ್ಷಣದ ವಿಭಾಗದಲ್ಲಿ ನಡೆಯುತ್ತದೆ. ಮಕ್ಕಳು ಆಟ ಪಾಠ ಎನ್ನು ತ್ತಲೇ ತಮಗಗೆ ಅರಿವಿಲ್ಲದಂತೆ ವಿಷಯ ಗಳನ್ನು ಕಲಿಯುತ್ತಾರೆ’ ಎಂದರು. ‘ಮಕ್ಕಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಪ್ರತಿ ವರ್ಷವೂ ವಾರ್ಷಿಕೋತ್ಸವ ನಡೆಸಬೇಕ’ ಎಂದು ಅವರು ಹೇಳಿದರು.

ಶಿಕ್ಷಕ ಟಿ.ಕೆ.ನಾರಾಯಣಗೌಡ ವಾರ್ಷಿಕ ವರದಿ ವಾಚಿಸಿದರು. ಮಕ್ಕಳಿ ಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸಾಧಕರನ್ನು ಸನ್ಮಾನಿಸಲಾಯಿತು.ಜಿ.ವಿ.ಮಂಜುನಾಥ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ವುಡನ್ ನಾರಾಯಣ್ ಸ್ವಾಮಿ, ನ್ಯಾತಪ್ಪ, ಗ್ರಾ.ಪಂ. ಸದಸ್ಯರಾದ ಮುರಳಿ, ಧರಣಿ ಬಾಬು, ಜಯಮ್ಮ, ಮುನಿವೇಲು, ಮುಖ್ಯ ಶಿಕ್ಷಕ ಮುನಿಯಲ್ಲಪ್ಪ, ಟಿ.ಕೆ.ಆಶ್ವತ್ಥನಾರಾಯಣ ಗೌಡ, ಶ್ರೀನಿವಾಸ್, ಕೃಷ್ಣಮೂರ್ತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.