ADVERTISEMENT

ಬಿಸಿಯೂಟ ತಯಾರಿಸಿದ ಶಿಕ್ಷಕಿಯರು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 8:51 IST
Last Updated 9 ಫೆಬ್ರುವರಿ 2018, 8:51 IST

ಮಾಲೂರು: ಬಿಸಿಯೂಟ ತಯಾರಕರು ಗುರುವಾರ ಶಾಲೆಗಳಿಗೆ ಬಾರದ ಕಾರಣ ಶಿಕ್ಷಕಿಯರೇ ಅಡುಗೆ ತಯಾರಿಸಿ ಮಕ್ಕಳಿಗೆ ಉಣ ಬಡಿಸಿದರು. ಪಟ್ಟಣ ಸೇರಿದಂತೆ ತಾಲ್ಲೂಕಿನ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಖಾಸಗಿ ಅನುದಾನಿತ ಶಾಲೆಗಳ ಅಡುಗೆ ಸಹಾಯಕಿಯರು ಸೇವೆಯನ್ನು ಕಾಯಂಗೊಳಿಸಿ ಸುಪ್ರೀಂ ಕೋರ್ಟ್ ಆದೇಶದನ್ವಯ ಕನಿಷ್ಠ ವೇತನ ನೀಡಬೇಕು ಎಂದು ಒತ್ತಾಯಿಸಿ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ತೆರಳಿದ ಕಾರಣ ಶಿಕ್ಷಕಿಯರೇ ಅಡುಗೆ ತಯಾರಿಸುವಂತಾಯಿತು.

ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ ಅಡುಗೆ ಸಹಾಯಕಿಯರು ಗೈರು ಹಾಜರಾಗಿದ್ದರಿಂದ ಆಯಾ ಶಾಲೆಗಳ ಎಸ್‌ಡಿಎಂಸಿ ಸದಸ್ಯರ ಸಹಕಾರ ಪಡೆದು ಮಕ್ಕಳಿಗೆ ಬಿಸಯೂಟ ನೀಡಬೇಕು ಎಂದು ಮೊದಲೇ ಸೂಚಿಸಲಾಗಿತ್ತು. ಆದ್ದರಿಂದ ತಾಲ್ಲೂಕಿನ 340 ಸರ್ಕಾರಿ ಶಾಲೆಗಳು ಹಾಗೂ 12 ಅನುದಾನಿತ ಖಾಸಗಿ ಶಾಲೆಗಳ ಸುಮಾರು 32,314 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಹಸಿವು ನೀಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಶಿಕ್ಷಣ ಸಂಯೋಜಕ ವೆಂಕಟಸ್ವಾಮಿ ತಿಳಿಸಿದರು.

ಬೇಳೆ ಬಾತ್, ಮಸಾಲ್ ವಡೆ

ADVERTISEMENT

‘ಇಂದು ಯಾವ ರೀತಿಯ ಊಟ ಬೇಕು ಎಂದು ಮಕ್ಕಳನ್ನೇ ಕೇಳಲಾಯಿತು. ಬೇಳೆ ಬಾತ್ ಮತ್ತು ಮಸಾಲ್ ವಡೆ ಬೇಕು ಎಂದು ತಿಳಿಸಿದರು. ಅದೇ ರೀತಿ ಅಡುಗೆ ತಯಾರಿಸಿ ಸುಮಾರು 200 ವಿದ್ಯಾರ್ಥಿಗಳಿಗೆ ಬಡಿಸಲಾಯಿತು’ ಎಂದು ಪಟ್ಟಣದ ಮಾಸ್ತಿ ಸರ್ಕಲ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಹುದ್ದೂರ್, ಶಿಕ್ಷಕಿಯರಾದ ಜ್ಯೋತಿ ಪ್ರಭ, ವರಲಕ್ಷ್ಮಮ್ಮ, ಅಕ್ಕಮಹಾದೇವಿ ತಿಳಿಸಿದರು.

ಅಂಕಿ ಅಂಶ

340 ತಾಲ್ಲೂಕಿನಲ್ಲಿರುವ ಸರ್ಕಾರಿ ಶಾಲೆಗಳು

12 ಅನುದಾನಿತ ಖಾಸಗಿ ಶಾಲೆ

32,314 ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.