ADVERTISEMENT

ಕಾಲಕ್ಕನುಗುಣವಾಗಿ ವ್ಯತ್ಯಾಸಗೊಂಡ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 9:48 IST
Last Updated 16 ಏಪ್ರಿಲ್ 2017, 9:48 IST
ಕೊಪ್ಪಳದ ನೌಕರರ ಭವನದಲ್ಲಿ ಶನಿವಾರ ಮಾಜಿ ಶಾಸಕ ಎಂ.ಬಿ.ದಿವಟರ ಅವರ ಸಂಸ್ಮರಣ ಗ್ರಂಥ ‘ಸಾಂಸ್ಕೃತಿಕ ನಾಯಕ’ ಗ್ರಂಥವನ್ನು ವಿಧಾನ ಪರಿಷತ್‌ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಬಿಡುಗಡೆಗೊಳಿಸಿದರು
ಕೊಪ್ಪಳದ ನೌಕರರ ಭವನದಲ್ಲಿ ಶನಿವಾರ ಮಾಜಿ ಶಾಸಕ ಎಂ.ಬಿ.ದಿವಟರ ಅವರ ಸಂಸ್ಮರಣ ಗ್ರಂಥ ‘ಸಾಂಸ್ಕೃತಿಕ ನಾಯಕ’ ಗ್ರಂಥವನ್ನು ವಿಧಾನ ಪರಿಷತ್‌ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಬಿಡುಗಡೆಗೊಳಿಸಿದರು   

ಕೊಪ್ಪಳ: ಇಂದಿನ ಮತ್ತು ಹಿಂದಿನ ರಾಜಕಾರಣಕ್ಕೆ ಅಜಗಜಾಂತರ ವ್ಯತ್ಯಾಸ ವಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.ನಗರದ ನೌಕರರ ಭವನದಲ್ಲಿ ಶನಿವಾರ ನೃಪತುಂಗ ಶಿಕ್ಷಣ ಸಂಸ್ಥೆ ಹಾಗೂ ಎಂ.ಬಿ. ದಿವಟರ ಅಭಿಮಾನಿ ಬಳಗದ ಆಶ್ರಯದಲ್ಲಿ ನಡೆದ ಹನು ಮಂತಪ್ಪ ಅಂಡಗಿ ಚಿಲವಾಡಗಿ ಸಂಪಾ ದಕತ್ವದ ಮಾಜಿ ಶಾಸಕ ಎಂ.ಬಿ.ದಿವಟರ ಅವರ ಸಂಸ್ಮರಣ ಗ್ರಂಥ ‘ಸಾಂಸ್ಕೃತಿಕ ನಾಯಕ’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದೆ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಚುನಾವಣೆಗಳು ನಡೆಯು ತ್ತಿದ್ದವು. ಆದರೆ ಇಂದು ಜಾತಿ ಮತ್ತು ಹಣದ ಆಧಾರದ ಮೇಲೆ ಚುನಾ ವಣೆಗಳು ನಡೆಯುತ್ತಿವೆ. ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಸಾಧಕನ ನೆನಪು ಮಾಡಿಕೊಳ್ಳುತ್ತಿರುವುದು ಶ್ಲಾಘನೀಯ. ದಿವಟರ ಅವರು ಮೂಲತಃ ವ್ಯಾಪಾರಿ ಮನೆತನದವರು. ಬಳಿಕ ಅವರು ಉಪ ನ್ಯಾಸಕರಾದರು. ಚಿಕ್ಕವ ಯಸ್ಸಿನಲ್ಲಿಯೇ ರಾಜಕೀಯ ಪ್ರವೇಶಿಸಿ, ಗಟ್ಟಿಯಾಗಿ ಬೇರೂ ರಿದರು. ತಮಗೆ ಸಿಕ್ಕ ಅವಕಾ ಶವನ್ನು ಬೇರೆಯವರಿಗೆ ಬಿಟ್ಟುಕೊಟ್ಟು ದೊಡ್ಡತನ ತೋರಿದರು. ಇವರು ಸಾಹಿತ್ಯ ಬಳಗದೊಂದಿಗೆ ಅನ್ಯೊನ್ಯ ಸಂಬಂಧ ಹೊಂದಿದ್ದರು ಎಂದರು.

ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ದಿವಟರ ಅವರು ಸಾಹಿತ್ಯ ಮತ್ತು ಸಂಸ್ಕೃತಿ ಪ್ರಿಯರಾಗಿದ್ದರು. ರಾಜಕಾರಣಿಗಳು ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಿಯರಾದರೆ ಅನೇಕ ಮಹಾನ್‌ ಕಾರ್ಯಗಳನ್ನು ಮಾಡಬಹುದು ಎನ್ನುವುದಕ್ಕೆ ಅವರು ಉದಾಹರಣೆ ಎಂದು ಹೇಳಿದರು.

ADVERTISEMENT

ಮಾಜಿಸಚಿವ ಅಮರೇಗೌಡ ಬಯ್ಯಾಪುರ ಅವರು ‘ಸಾಂಸ್ಕೃತಿಕ ನಾಯಕ’ ಗ್ರಂಥ ಬಿಡುಗಡೆ ಮಾಡಿದರು. ಹಡಗಲಿಯ ಹಿರಿಶಾಂತವೀರ ಸ್ವಾಮೀಜಿ, ದದೇಗಲ್‌ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ನ ಮಾಜಿ ಸಭಾಪತಿ ಡಾ. ವೀರಣ್ಣ ಮತ್ತಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರಾಘವೇಂದ್ರ ಹಿಟ್ನಾಳ್‌್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್‌ ಜುಲ್ಲು ಖಾದ್ರಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ನಗರಸಭೆ ಸದಸ್ಯ ಅಮ್ಜದ್‌ ಪಟೇಲ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಕರಿಯಪ್ಪ ಮೇಟಿ, ಸಾಹಿತಿಗಳಾದ ಎಚ್‌.ಎಸ್‌. ಪಾಟೀಲ್‌, ವಿಠ್ಠಪ್ಪ ಗೋರಂಟ್ಲಿ, ಬಸವರಾಜ್‌ ಆಕಳವಾಡಿ, ಈಶ್ವರ ಹತ್ತಿ, ವಿಮಲಾ ಇನಾಮದಾರ, ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷೆ ನಿರ್ಮಲಾ ಬಳ್ಳೊಳ್ಳಿ ಮುಖಂಡರಾದ ಸಿ.ವಿ.ಚಂದ್ರಶೇಖರ್‌್, ಕೆ.ಎಂ. ಸೈಯ್ಯದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.