ADVERTISEMENT

ಚೀನಾ ವಸ್ತುಗಳ ನಿಷೇಧಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 7:37 IST
Last Updated 20 ಜುಲೈ 2017, 7:37 IST

ಗಂಗಾವತಿ: ಪಾಕಿಸ್ತಾನದ ಜೊತೆ ಗುರುತಿಸಿಕೊಂಡಿರುವ ಚೀನಾ ದೇಶದ ವಸ್ತುಗಳನ್ನು ಬಹಿಷ್ಕರಿಸುವಂತೆ ಕೋರಿ ನ್ಯಾಯಾಲಯದ ಎದುರು ವಕೀಲರು ಬುಧವಾರ ಕೈಗೆ ಕೆಂಪು ಪಟ್ಟಿ ಧರಿಸಿ ಪ್ರದರ್ಶನ ನಡೆಸಿದರು.

ಹಿರಿಯ ವಕೀಲ ದೇಶಪಾಂಡೆ ಮಾತನಾಡಿ, ‘ಆರ್ಥಿಕವಾಗಿ ಚೀನಾಕ್ಕೆ ಭಾರತ ಬಹುದೊಡ್ಡ ಮಾರುಕಟ್ಟೆ.  ಆದರೆ ಇತ್ತೀಚಿನ ದಿನಗಳಲ್ಲಿ ಚೀನಾ ದೇಶದ ಮನಸ್ಥಿತಿ ಬದಲಾಗಿದೆ. ಭಯೋತ್ಪಾದನೆಗೆ ಪ್ರಚೋದನೆ ನೀಡುವ ಪಾಕಿಸ್ತಾನದೊಂದಿಗೆ ಗುರುತಿಸಿಕೊಂಡಿದೆ. ಇದರಿಂದ ವಿಶ್ವದ ಶಾಂತಿ ಮತ್ತು ಸೌಹಾರ್ದತೆಗೆ ಸವಾಲಾಗಿ ಪರಿಣಾಮಿಸಿದೆ’ ಎಂದರು. 

‘ಎಂಟು ದೇಶಗಳೊಂದಿಗೆ ಗಡಿಹಂಚಿಕೊಂಡಿರುವ ಚೀನಾ ದೇಶವು ಆರ್ಥಿಕವಾಗಿ ಶಕ್ತಿಶಾಲಿಯಾಗಿರುವ ಕಾರಣ ಎಲ್ಲ ದೇಶಗಳಿಗೆ ಬೆದರಿಕೆ ಹಾಲು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ಸಂಘದ ಉಪಾಧ್ಯಕ್ಷ ಬಿ.ಅಂಜಿನಪ್ಪ, ಕಾರ್ಯದರ್ಶಿ ಮುರ್ತುಜಾಸಾಬ ಭಾವಿಕಟ್ಟಿ, ಖಜಾಂಚಿ ಎಚ್.ಎಂ. ಮಂಜುನಾಥ ಪ್ರಮುಖರಾದ ಶರದ್ ದಂಡಿನ್, ಸುಭಾಷ್ ಸಾದರ, ವೀರೇಶ ಕಮಲಾಪುರ, ಶ್ರೀನಿವಾಸ ಯಾದವ, ಶಿವಪ್ಪ ನೆವಣಕ್ಕಿ, ಎನ್. ಸಜ್ಜಿಹೊಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.