ADVERTISEMENT

‘ನಿವೇಶನ ಸಿಗದೆ ಆರಂಭವಾಗದ ಕಚೇರಿ’

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 8:55 IST
Last Updated 10 ನವೆಂಬರ್ 2017, 8:55 IST

ಕನಕಗಿರಿ: ನಿವೇಶನ ಸಿಗದ ಕಾರಣ ಅಗ್ನಿ ಶಾಮಕ ದಳದ ಕಚೇರಿ ಪಟ್ಟಣದಲ್ಲಿ ಇನ್ನೂ ಆರಂಭವಾಗಿಲ್ಲ ಎಂದು ಗಂಗಾವತಿ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಖಾಜಾಮೈನೂದ್ದೀನ್ ತಿಳಿಸಿದರು.

ಇಲ್ಲಿನ ಗ್ಲೋಬಲ್ ಶಿಕ್ಷಣ ಸಂಸ್ಥೆಯ ಬೆಸ್ಟ್‌ ಪಿಯುಸಿ ಹಾಗೂ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಅಣುಕು ಪದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಚೇರಿಗೆ ಒಂದರಿಂದ ಎರಡು ಎಕರೆ ಭೂಮಿಯ ಅವಶ್ಯಕತೆ ಇದೆ, ಮುಖ್ಯ ರಸ್ತೆಯಲ್ಲಿ ಭೂಮಿ ಸಿಕ್ಕರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ, ಭೂಮಿ ನೀಡುವಂತೆ ಸಂಬಂಧಿಸಿದ ಕಚೇರಿಗಳಿಗೆ ಮನವಿ ನೀಡಲಾಗಿದೆ. ಆದರೆ, ಉಪಯೋಗವಾಗಿಲ್ಲ ಎಂದು ವಿಷಾದಿಸಿದರು.

ಬೆಂಕಿಯಿಂದ ನಡೆಯುವ ಅವಘಡ ನಡೆದ ಸ್ಥಳ, ಊರು, ವಾರ್ಡ್‌, ವಿಳಾಸ ಇತರೆ ಮಾಹಿತಿಗಳನ್ನು ಸ್ಪಷ್ಟ ನೀಡಿದರೆ ಇಲಾಖೆಗೆ ಅನುಕೂಲವಾಗಲಿದೆ ಎಂದರು. ಅಗ್ನಿಶಾಮಕ ಸಿಬ್ಬಂದಿ ಮಂಜುನಾಥ ಮಾತನಾಡಿ ಜೀವದ ಹಂಗುತೊರೆದು ಸಾರ್ವಜನಿಕರ ಆಸ್ತಿಪಾಸ್ತಿ ಉಳಿಸಲು ಇಲಾಖೆ ಹಗಲಿರುಳು ಶ್ರಮಿಸುತ್ತಿದೆ ಎಂದು ತಿಳಿಸಿದರು.

ADVERTISEMENT

ಪ್ರಾಂಶುಪಾಲರಾದ ರಾಘವೇಂದ್ರ ಎಸ್‌. ಜಿ. ರಾಮಪ್ಪ . ಉಪನ್ಯಾಸಕ ಬಿ. ಎಂ. ಲಾಯನ್, ವಿದ್ಯಾರ್ಥಿ ಗವಿಸಿದ್ದ ಗದ್ದಿ ಮಾತನಾಡಿದರು. ಅಗ್ನಿಶಾಮಕರಾದ ಸಂಗಮೇಶ ಕಳ್ಳಿಗುಡ್ಡ, ಮಲ್ಲಪ್ಪ, ವೀರೇಶ, ಸಿಬ್ಬಂದಿ ವೆಂಕಟೇಶ ಉಪನ್ಯಾಸಕರಾದ ವಿಜಯ ಮಹಾಂತೇಶ, ಬೆಟ್ಟಪ್ಪ ಇತರರು ಇದ್ದರು. ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಂದ ಅಣುಕು ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.