ADVERTISEMENT

ಪುರಂದರದಾಸರ ಸಂಭ್ರಮದ ಉತ್ಸವ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 8:26 IST
Last Updated 28 ಜನವರಿ 2017, 8:26 IST

ಕುಷ್ಟಗಿ: ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರ ಪುರಂದರದಾಸ ಉತ್ಸವವನ್ನು ಆಚರಿಸಲಾಯಿತು. ಜಯತೀರ್ಥರ ಮತ್ತು ರಾಘವೇಂದ್ರಸ್ವಾಮಿಗಳ ಬೃಂದಾವನ ಹಾಗೂ ಪುರಂದರದಾಸರ ಮೂರ್ತಿಗೆ ಪಂಚಾಮೃತ ಅಭಿಷೇಕ, ಭಜನೆ, ಪುರಂದರದಾಸರ ಉತ್ಸವ ಮೂರ್ತಿಯೊಂದಿಗೆ ರಥೋತ್ಸವ ನಡೆಯಿತು. ಗುರುರಾಜ ಭಜನಾಮಂಡಳಿ, ಅಡವಿಮುಖ್ಯಪ್ರಾಣೇಶ ಭಜನಾ ಮಂಡಳಿ ಹಾಗೂ ರಮಾ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

ರಾಘವೇಂದ್ರ ಸ್ವಾಮಿ ಮಠದ ಅರ್ಚಕರಾದ ಪ್ರಹ್ಲಾದಾಚಾರ ಜೋಷಿ, ಅಡವಿರಾಯ ದೇವಸ್ಥಾನದ ಅರ್ಚಕ ಮಧ್ವಾಚಾರ ಆಚಾರ, ಅಡಿವ್ಯಾಚಾರ ಚಳಗೇರಿ, ನಾರಾಯಣಾಚಾರ ಪುರಾಣಿಕ, ಶೇಷಾಚಾರ ಕಟ್ಟಿ. ಪ್ರಮುಖರಾದ ತಿಮ್ಮಪ್ಪಯ್ಯ ದೇಸಾಯಿ, ಅಡವಿರಾವ ತಿಕೋಟಿಕರ, ತಮ್ಮಣ್ಣಾಚಾರ ದಿಗ್ಗಾವಿ, ಪ್ರಹ್ಲಾದಾಚಾರ ಸೌದಿ, ಭೀಮಸೇನ ಹಂಜಕ್ಕಿ, ಜಯತೀರ್ಥ ಸೌದಿ, ಬಿಂದುಮಾಧವ ಜೋಷಿ, ಕೃಷ್ಣಾಚಾರ ರಾಜಪುರೋಹಿತ, ಅರವಿಂದಕುಮಾರ ದೇಸಾಯಿ ಇದ್ದರು.

ವಿವಿಧ ಭಜನಾ ಮಂಡಳಿಯ ಪ್ರಮುಖರಾದ ರಾಮಾಚಾರ ಪುರಾಣಿಕ, ರಮೇಶ ಯಾಳಗಿ, ಶಾಂತಾಬಾಯಿ ಗುಮಾಸ್ತೆ, ಲಕ್ಷ್ಮಿಬಾಯಿ ಬನ್ನಟ್ಟಿ ಮತ್ತಿತರರು ಪುರಂದರ ದಾಸರ ಭಕ್ತಿಗೀತೆಗಳನ್ನು ಒಳಗೊಂಡ ಭಜನೆ ಸೇವೆಯಲ್ಲಿ ಪಾಲ್ಗೊಂಡಿದ್ದರು. ನಂತರ ಅಡಿವ್ಯಾಚಾರ ಚಳಗೇರಿ ಅವರ ನಿವಾಸದಲ್ಲಿ ಸಂಜೆ ಪುರಂದರ ಉತ್ಸವದ ಅಂಗವಾಗಿ ವಿಶೇಷ ಭಜನೆ ಕಾರ್ಯಕ್ರಮ ನಡೆಯಿತು. ಹಿರೇಬನ್ನಿಗೋಳ ಗ್ರಾಮದಲ್ಲಿ ನಡೆದ ಪುರಂದರದಾಸ ಉತ್ಸವದಲ್ಲಿ ವಿಶೇಷ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.