ADVERTISEMENT

‘ಪ್ರಕೃತಿ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 8:59 IST
Last Updated 23 ಏಪ್ರಿಲ್ 2017, 8:59 IST

ಗಂಗಾವತಿ: ಪ್ರಕೃತಿಯನ್ನು ನಾವು ಸಂರಕ್ಷಿಸಿಕೊಂಡು ಹೋದರೆ ಮಾತ್ರ ಜೀವ ಸಂಕುಲವನ್ನು ಪ್ರಕೃತಿ ಪೋಷಿಸುತ್ತದೆ. ಇಲ್ಲವಾದಲ್ಲಿ ಈ ಭೂಮಿಯಿಂದ ಜೀವ ವೈವಿಧ್ಯಗಳು ನಿಧಾನವಾಗಿ ಕಣ್ಮರೆಯಾಗುತ್ತವೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಭೋಲಾ ಪಂಡಿತ್ ಹೇಳಿದರು.ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಶನಿವಾರ ವಕೀಲರ ಸಂಘದ ಗಂಗಾವತಿ ತಾಲ್ಲೂಕು ಘಟಕ ಹಾಗೂ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವ ಭೂ ದಿನಾಚರಣೆಯಲ್ಲಿ ಮಾತನಾಡಿದರು.

ಅಭಿವೃದ್ಧಿಯ ನೆಪದಲ್ಲಿ ಅವೈಜ್ಞಾನಿಕ ಹಾಗೂ ಪ್ರಕೃತಿಗೆ ವಿರುದ್ಧವಾಗಿ ಮಾನವನ ಚಟುವಟಿಕೆ ನಡೆಯುತ್ತಿದೆ. ಇದು ಹೀಗೆ ಮುಂದುವರಿದರೆ ಕಾಡೆಲ್ಲ ನಾಶವಾಗಿ ಉಷ್ಣತೆ ಹೆಚ್ಚಳವಾಗುತ್ತದೆ. ಈ ಭೂಮಿ ವಾಸಕ್ಕೆ ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ. ಅದಕ್ಕೂ ಮುನ್ನ ಮನುಷ್ಯ ಎಚ್ಚೆತ್ತುಕೊಳ್ಳಬೇಕು ಎಂದರು.ನ್ಯಾಯಾಧೀಶ ಕೆ.ಗೋಕುಲ್, ವಕೀಲರ ಸಂಘದ ಅಧ್ಯಕ್ಷ ಜವಳಿ ನಾಗರಾಜ, ವಕೀಲರಾದ ಶರದ ದಂಡಿನ, ವಿಜಯಲಕ್ಷ್ಮಿ, ಪ್ರೇಮಮೂರ್ತಿ ಹಿರೇಮಠ, ಎಚ್. ಕನಕರಾಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT