ADVERTISEMENT

‘ಮಕ್ಕಳ ಪ್ರತಿಭೆ ಗುರುತಿಸಿ’

​ಪ್ರಜಾವಾಣಿ ವಾರ್ತೆ
Published 24 ಮೇ 2017, 5:49 IST
Last Updated 24 ಮೇ 2017, 5:49 IST

ಯಲಬುರ್ಗಾ: ‘ಗ್ರಾಮೀಣ ಭಾಗದ ಮಕ್ಕಳಿಗೆ ತಲುಪಿದರೆ ಯೋಜನೆಗಳ ಮೂಲ ಉದ್ದೇಶ ಈಡೇರಿದಂತಾಗುತ್ತದೆ. ಈ ನಿಟ್ಟಿನಲ್ಲಿ ಅನುಷ್ಠಾನಾಧಿಕಾರಿಗಳಿಗೆ ಹೆಚ್ಚು ಕ್ರಿಯಾಶೀಲತೆ ಅಗತ್ಯವಿದೆ’ ಎಂದು ಸಿಡಿಪಿಒ ಮುನಿರಾಜು ಹೇಳಿದರು.

ತಾಲ್ಲೂಕಿನ ತಾಳಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಧಾರವಾಡ ಬಾಲ ವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೇವೂರಿನ ಎಸ್‌ಕೆಪಿಎಸ್‌ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿರು.

‘ಮಕ್ಕಳನ್ನು ಉತ್ತಮ ಪ್ರತಿಭಾವಂತರಾಗಿ ರೂಪಿಸಬೇಕು. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಬೇಸಿಗೆ ಶಿಬಿರದಲ್ಲಿ ಆಗಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ, ಮುಖಂಡರಾದ ಸಿಆರ್‌ಪಿ ಸಂಗಯ್ಯ ಹಿರೇಮಠ, ಮುಖ್ಯಶಿಕ್ಷಕ ಬಿ.ಎಸ್‌.ಚಂದ್ರಗಿರಿ, ಸಂಸ್ಥೆಯ ಕಾರ್ಯದರ್ಶಿ ಡಿ.ಕೆ.ಗೊಂದಿ, ಸದಸ್ಯ ಯಮನಪ್ಪ ಗಡ್ಡದ, ಶಿಕ್ಷಕ ಶರಣಪ್ಪ ಮಕ್ಕಳ್ಳಿ, ಶರೀಫ್, ಶರಣಪ್ಪ ಜಿಗಳೂರ, ಎಚ್‌.ಎಚ್‌.ಹಿರೇಮನಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.