ADVERTISEMENT

‘ರಂಗಭೂಮಿ ಕಲೆ ಶ್ರೀಮಂತ’

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 6:13 IST
Last Updated 21 ಏಪ್ರಿಲ್ 2017, 6:13 IST

ಯಲಬುರ್ಗಾ: ರಂಗಭೂಮಿ ಕಲಾವಿದರು ಗ್ರಾಮೀಣ ಪ್ರದೇಶದಲ್ಲಿ ಕಲೆಯನ್ನು ಶ್ರೀಮಂತಗೊಳಿಸುತ್ತಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ಹೇಳಿದರು.ತಾಲ್ಲೂಕಿನ ಕರಮುಡಿ ಗ್ರಾಮದಲ್ಲಿ ಹುಚ್ಚೀರೇಶ್ವರ ಜಾತ್ರೋತ್ಸವದ ಪ್ರಯುಕ್ತ ಬುಧವಾರ ಕರವೀರಭದ್ರೇಶ್ವರ ಕಲಾ ನಾಟ್ಯ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಹುಚ್ಚೀರೇಶ್ವರ ಮಹಾತ್ಮೆ  ನಾಟಕ ಪ್ರದರ್ಶನದಲ್ಲಿ ಮಾತನಾಡಿದ ಅವರು, ಗ್ರಾಮೀಣ ಕಲಾವಿದರಿಗೆ ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹದ ಹೊರತೆ ಇದೆ ಎಂದರು.

ಕಲಾವಿದರಾಗಿ 25 ವರ್ಷ ಸೇವೆ ಸಲ್ಲಿಸಿದವರು ಮಾಸಾಶನ ಪಡೆಯಬಹುದು. ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಇಲಾಖೆ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಹಿರಿಯ ಕಲಾವಿದ ಡಾ. ಕಾಶಿನಾಥ ಕುಕನೂರ ಚಾಲನೆ ನೀಡಿದರು. ಎಪಿಎಂಸಿ ಅಧ್ಯಕ್ಷ ರಾಮಣ್ಣ ಪ್ರಭಣ್ಣವರ ಅಧ್ಯಕ್ಷತೆ ವಹಿಸಿದ್ದರು. ಬಸಯ್ಯಶಾಸ್ತ್ರಿ ಭಿಕ್ಷಾವತಿಮಠ ಸಾನಿಧ್ಯ ವಹಿಸಿದ್ದರು. ಶರಣಪ್ಪಗೌಡ ಪೊಲೀಸ್‌ಪಾಟೀಲ, ಸಿದ್ದಯ್ಯ ಬಿಜಕಲ್ಲ, ತೊಂಡಿಹಾಳ ಹುಚ್ಚಪ್ಪಜ್ಜ, ಬಸವರಾಜ ಉಳ್ಳಾಗಡ್ಡಿ, ಶರಣಪ್ಪ ಹಿರೇಮನಿ, ವ್ಯವಸ್ಥಾಪಕ ಕಾಶಯ್ಯ ನಂದಿಕೋಲಮಠ, ಬಸವರಾಜ ಸಂಗಟಿ ಇದ್ದರು.ಶೇಖಪ್ಪ ಮಾನಶೆಟ್ಟಿ, ವೀರಭದ್ರಯ್ಯ ಕೆಂಭಾವಿಮಠ, ಮೈಲಾರಗೌಡ ತೊಂಡಿಹಾಳ ಸಂಗೀತ ಕಾರ್ಯಕ್ರಮ ನೀಡಿದರು. ಗಂಗಪ್ಪ ಹವಳೆ ಸ್ವಾಗತಿಸಿದರು.ಸಿ.ಎಸ್‌.ಗೊಂಗಡಶೆಟ್ಟಿ ವಂದಿಸಿದರು. ವಿರೂಪಾಕ್ಷಪ್ಪ ಉಳ್ಳಾಗಡ್ಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT