ADVERTISEMENT

ವಾಲ್ಮೀಕಿ ಸಮಾಜದ ಸಂಘಟನೆಗೆ ಒತ್ತು

ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಶರಣಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 10:20 IST
Last Updated 10 ಜುಲೈ 2017, 10:20 IST

ಕನಕಗಿರಿ:  ಈ ಭಾಗದ ವಾಲ್ಮೀಕಿ ನಾಯಕ ಜನಾಂಗದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ವಾಲ್ಮೀಕಿ ನಾಯಕ ಸಮಾಜದ ನೂತನ ಅಧ್ಯಕ್ಷ ಶರಣಪ್ಪ ಸೋಮಸಾಗರ ತಿಳಿಸಿದರು.

ಇಲ್ಲಿಗೆ ಸಮೀಪದ ಹಿರೇಹಳ್ಳ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕನಕಗಿರಿ, ನವಲಿ, ಹುಲಿಹೈದರ ಹೋಬಳಿ ಮಟ್ಟದ ವಾಲ್ಮೀಕಿ ನಾಯಕ ಸಮಾಜದವರ ಸಭೆಯಲ್ಲಿ ಅವರು ಮಾತನಾಡಿದರು.  

‘ಇಲ್ಲಿನ ಪಟ್ಟಣ ಪಂಚಾಯಿತಿ ಹಾಗೂ ಒಣ ಭೂಮಿ ಬೇಸಾಯ ವ್ಯಾಪ್ತಿಯ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಲ್ಮೀಕಿ ಸಮಾಜದವರನ್ನು ಸಂಘಟಿಸಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಪಾಲಕರಿಗೆ ತಿಳಿಸಲಾಗುವುದು.  ಮುಂದಿನ ದಿನಗಳಲ್ಲಿ ರಚನಾತ್ಮಕ ಕಾರ್ಯಕ್ರಮ ಗಳನ್ನು ಆಯೋಜಿಸಿ ಪ್ರತಿಭಾವಂತ ರನ್ನು ಪ್ರೋತ್ಸಾಹಿಸಲಾಗುವುದು’ ಎಂದು ತಿಳಿಸಿದರು.  

ADVERTISEMENT

ಯುವ ಮುಖಂಡ ಹುಲಿಹೈದರ ರಮೇಶ ನಾಯಕ ಮಾತನಾಡಿ, ‘ಶಿಕ್ಷಣದಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯ. ಮೂಢನಂಬಿಕೆ, ಕಂದಾಚಾರಗಳನ್ನು ಬಿಟ್ಟು ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು’ ಎಂದರು.

ಎಪಿಎಂಸಿ ಮಾಜಿ ಉಪಾಧ್ಯಕ್ಷ ರಾಜಾ ಚಚ್ಚಪ್ಪ ನಾಯಕ ಮಾತನಾಡಿ, ಯುವಕರು ಸಮಾಜದ ಸಂಘಟನೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು. ತಾ.ಪಂ ಸದಸ್ಯ ಕನಕಪ್ಪ ತಳವಾರ,   ಗ್ಯಾನಪ್ಪ ಗಾಣದಾಳ, ಶರತ ನಾಯಕ, ರಾಮನಗೌಡ ಬುನ್ನಟ್ಟಿ ಮಾತನಾಡಿದರು. ಗರುಡಪ್ಪ ನಾಯಕ, ಸೋಮನಾಥ ಚಿಕ್ಕಮಾದಿನಾಳ, ಪಂಪಾಪತಿ ತರ್ಲಕಟ್ಟಿ, ಶೇಖರಗೌಡ ಇದ್ದರು.

ಪದಾಧಿಕಾರಿಗಳು: ಕನಕಗಿರಿ, ನವಲಿ, ಹುಲಿಹೈದರ ಹೋಬಳಿ ಮಟ್ಟದ ವಾಲ್ಮೀಕಿ ನಾಯಕ ಸಮಾಜದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರಾಮನಗೌಡ ಬುನ್ನಟ್ಟಿ (ಗೌರವಾಧ್ಯಕ್ಷ), ಶರಣಪ್ಪ ಸೋಮಸಾಗರ (ಅಧ್ಯಕ್ಷ), ಗುರುಮೂರ್ತಿಗೌಡ (ಉಪಾಧ್ಯಕ್ಷ), ಸೋಮನಾಥ ಆದಾಪುರ, ರಾಮಣ್ಣ ಚಿಕ್ಕಮಾದಿನಾಳ, ರಾಮಕೃಷ್ಣ ಕನಕಗಿರಿ ಹಾಗೂ ಮುದಿಯಪ್ಪ ಹಿರೇಖೇಡ (ಪ್ರಧಾನ ಕಾರ್ಯದರ್ಶಿಗಳು), ನಾಗರಾಜ ಮಲ್ಲಾಪುರ (ಖಜಾಂಚಿ),  ನಾಗರಾಜ ಗೌರಿಪುರ (ವಿದ್ಯಾರ್ಥಿ ಸಂಘಟನೆ ಕಾರ್ಯದರ್ಶಿ ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.