ADVERTISEMENT

‘ಹಳೆಯ ವಿದ್ಯಾರ್ಥಿಗಳ ಸಾಧನೆ ಸ್ಫೂರ್ತಿ’

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 11:08 IST
Last Updated 16 ಜುಲೈ 2017, 11:08 IST

ಕಾರಟಗಿ: ‘ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ  ನೀಡುವ ಆಶಯ ಹೊಂದಿರುವ ಸಂಸ್ಥೆ ನಮ್ಮದು. ಈಗಾಗಲೆ ದೇಶ ಸೇರಿದಂತೆ ವಿದೇಶಗಳಲ್ಲಿ ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದು, ಈಗಿನ ವಿದ್ಯಾರ್ಥಿಗಳಿಗೆ ಅವರು ಸ್ಫೂರ್ತಿಯಾಗಲಿ ಎಂದು ಶರಣಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಬಿ. ಜಿ. ಅರಳಿ ಹೇಳಿದರು.

ಶನಿವಾರ ನಡೆದ ಶರಣಬಸವೇಶ್ವರ ವಿದ್ಯಾಸಂಸ್ಥೆಯ ನೂತನ ನಿರ್ದೇಶಕರಾದ ಸಣ್ಣ ವೀರೇಶಪ್ಪ ವೀರಭದ್ರಪ್ಪ ಚಿನಿವಾಲ ಹಾಗೂ ಮಲ್ಲಿಕಾರ್ಜುನ ವೀರೇಶಪ್ಪ ಹಿಂದಪುರ ಅವರನ್ನು  ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಪಟ್ಟಣದ ಯೆಸ್ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಬಿ. ಗುರುಪ್ರಸಾದ ಯಂಗ್ ಅಚೀವರ್ಸ್ ಪ್ರಶಸ್ತಿ ನೀಡಿ ಗೌರವಿಸಿದರು.

ADVERTISEMENT

ಆಡಳಿತ ಮಂಡಳಿಯ ಜಗದೀಶ ಅವರಾದಿ, ಚನ್ನಬಸಪ್ಪ ಸುಂಕದ, ಡಾ. ಎಸ್, ಬಿ. ಶೆಟ್ಟರ್, ಸಿದ್ರಾಮಪ್ಪ ಪಲ್ಲೇದ, ಬಸವರಾಜ ಗದ್ದಿ, ಮಲ್ಲಿಕಾರ್ಜುನ ಕೊಟಗಿ, ರುದ್ರೇಶ ಗಣಾಚಾರಿ, ಶಿವರುದ್ರಮ್ಮ ಕಂಚಿ, ಮುಖ್ಯಗುರುಗಳಾದ ಮಹಾಂತೇಶ ಗದ್ದಿ, ವೀರೇಶ್ ಮ್ಯಾಗೇರಿ, ವಿಜಯಲಕ್ಷ್ಮೀ ಮೇಲಿನಮನಿ, ಅಮರೇಶ್, ರೂಪಾ  ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.