ADVERTISEMENT

ಆಂತರ್ಯ ಶುದ್ಧಿಯಿಂದ ಉತ್ತಮ ಜ್ಞಾನ

ಚಿಕ್ಕರಸಿನಕೆರೆ ಕಾಲಭೈರವೇಶ್ವರ ದೇಗುಲ ಉದ್ಘಾಟಿಸಿದ ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಮೇ 2017, 7:40 IST
Last Updated 8 ಮೇ 2017, 7:40 IST
ಭಾರತೀನಗರ:  ಆಂತರ್ಯ ಶುದ್ಧಿ ಯಿಂದ ಮಾತ್ರ ಉತ್ತಮ ಜ್ಞಾನ ಲಭಿಸುತ್ತದೆ ಎಂದು ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
 
ಸಮೀಪದ ಚಿಕ್ಕರಸಿನಕೆರೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಕಾಲಭೈರವೇಶ್ವರ ದೇವಾಲಯ ಉದ್ಘಾಟಿಸಿ ಅವರು ಮಾತನಾಡಿದರು.
 
ಮನಸ್ಸಿನ ಶುದ್ಧಿಯಿಂದ ಮಾತ್ರ ಮಾನವ ಶ್ರೇಷ್ಠನಾಗುತ್ತಾನೆಯೇ ಹೊರತು ದೇಹದ ಶುದ್ಧಿಯಿಂದಲ್ಲ. ಆತನ ಕೆಲಸದಿಂದಂತೂ ಅಲ್ಲವೇ ಅಲ್ಲ. ಕೈ ಕೆಸರಾದರೂ ಮನುಷ್ಯನ ಮನಸು ಕೆಸರಾಗಬಾರದು. ಆದ್ದರಿಂದ ಮನಸ್ಸಿನ ಶುದ್ಧಿಯಿಂದ ಮಾತ್ರ ಮಾನವನಿಗೆ ಶ್ರೇಷ್ಠ ಜ್ಞಾನ ಲಭಿಸುತ್ತದೆ ಎಂದರು.
 
ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೋಗೀಗೌಡ ಮಾತನಾಡಿ, ಚಿಕ್ಕರಸಿನಕೆರೆ ಗ್ರಾಮದ ಕಾಲಭೈರ ವೇಶ್ವರನಿಗೆ ಪುರಾತನ ಇತಿಹಾಸವಿದೆ. ದೇವಾಲಯದ ಬೆಳವಣಿಗೆಯಲ್ಲಿ ಪ್ರತಿ ಹೆಜ್ಜೆಗೂ ಚುಂಚನಗಿರಿ ಸ್ವಾಮೀಜಿ ಸಲಹೆ ಸಹಕಾರವಿದೆ. ಮುಂದೆಯೂ ಶ್ರೀಗಳು ಕ್ಷೇತ್ರವನ್ನು ತಮ್ಮ ಸುಪರ್ದಿಗೆ ವಹಿಸಿಕೊಂಡು ಮುನ್ನಡೆಸಬೇಕು ಎಂದು ಮನವಿ ಮಾಡಿದರು.
 
ಪೂಜಾಕುಣಿತ, ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಪೂರ್ಣಕುಂಭ ತಂಡಗಳು  ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
 
ಪುರುಷೋತ್ತಮನಂದಾನಾಥ ಸ್ವಾಮೀಜಿ, ಅನ್ನದಾನೇಶ್ವರನಾಥ ಸ್ವಾಮೀಜಿ, ಮಾಜಿ ಸಂಸದ ಜಿ.ಮಾದೇಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ, ಮಾಜಿ ಶಾಸಕಿ ಮಲ್ಲಾಜಮ್ಮ, ಮನ್‌ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಜಿ.ಪಂ ಮಾಜಿ ಸದಸ್ಯ ಚಂದೂಪುರ ಪಾಪಣ್ಣ, ಜಿ.ಪಂ ಸದಸ್ಯೆ ಸುಜಾತಾ, ಸಿ.ಕೆ.ಶಿವಣ್ಣ, ಕಾರ್ಯದರ್ಶಿ ಶಿವಲಿಂಗೇಗೌಡ, ಜೈಭೀಮ್ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಸಿ.ಶಿವಲಿಂಗಯ್ಯ, ಪ್ರೊ. ಎಚ್.ಬಿಳಿಗೌಡ, ಪ್ರೊ.ಬಿ.ಎಸ್. ಬೋರೇಗೌಡ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.