ADVERTISEMENT

ಆಸ್ತಿ ಆಸೆಗೆ ತಲಾಖ್‌ ಕೊಡಿಸಿದ ಮಕ್ಕಳು!

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 8:58 IST
Last Updated 6 ಡಿಸೆಂಬರ್ 2017, 8:58 IST
ಆಸ್ತಿ ಆಸೆಗೆ ತಲಾಖ್‌ ಕೊಡಿಸಿದ ಮಕ್ಕಳು!
ಆಸ್ತಿ ಆಸೆಗೆ ತಲಾಖ್‌ ಕೊಡಿಸಿದ ಮಕ್ಕಳು!   

ಮಂಡ್ಯ: ನಾಗಮಂಗಲ ತಾಲ್ಲೂಕು ಬೆಳ್ಳೂರಿನಲ್ಲಿ ನಾಲ್ವರು ಪುತ್ರರು ಆಸ್ತಿ ಆಸೆಗಾಗಿ ತಂದೆ–ತಾಯಿಗೆ ತಲಾಖ್‌ ಕೊಡಿಸಿ, ವೃದ್ಧ ದಂಪತಿಯನ್ನು ಬೇರ್ಪಡಿಸಿ ಮನೆಯಿಂದ ಹೊರ ಹಾಕಿದ್ದಾರೆ.

ಅಬ್ದುಲ್‌ ಮಜೀದ್‌ (77), ಫಾತಿಮಾ ಬೀ (65) ದಂಪತಿ ಮಕ್ಕಳಿಂದ ಬೇರೆಯಾಗಿ ಬೀದಿಗೆ ಬಂದವರು. ಇವರಿಗೆ ಐದು ಮಂದಿ ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಬೆಳ್ಳೂರು ಪಟ್ಟಣದಲ್ಲಿ ಫಾತಿಮಾ ಬೀ ಅವರಿಗೆ 1.28 ಎಕರೆ ಜಾಗ, 36 ಗುಂಟೆ ತೋಟ ಇದೆ. ಅಬ್ದುಲ್ ಹೆಸರಿನಲ್ಲಿ ಮನೆ ಇದೆ.

ಬೀದಿಗೆ ಬಿದ್ದ ವೃದ್ಧ ದಂಪತಿಗೆ ನಗರದ ಹಿರಿಯ ನಾಗರಿಕರ ಸಹಾಯವಾಣಿ ಆಶ್ರಯ ನೀಡಿತ್ತು. ನಂತರ ಕುಟುಂಬದಿಂದ ಬೇರೆಯಾಗಿ ಬೆಳ್ಳೂರಿನ ಉಮರ್‌ ನಗರದಲ್ಲಿ ವಾಸ ಮಾಡುತ್ತಿದ್ದ ಹಿರಿಯ ಪುತ್ರ ನಯಾಜ್‌ ಪಾಷಾ ತಂದೆ–ತಾಯಿಯನ್ನು ಮನೆಗೆ ಕರೆದೊಯ್ದಿದ್ದಾರೆ. ನಂತರ ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ADVERTISEMENT

‘ನನಗೆ ಹೃದಯಾಘಾತವಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಈ ಸಂದರ್ಭದಲ್ಲಿ ನನ್ನ ತಮ್ಮಂದಿರು ಆಸ್ತಿ ಬರೆಸಿಕೊಳ್ಳಲು ಯತ್ನಿಸಿದ್ದಾರೆ. ತಂದೆ–ತಾಯಿ ಒಪ್ಪದಿದ್ದಾಗ ಬಲವಂತವಾಗಿ ತಲಾಖ್‌ ಕೊಡಿಸಿ ನಂತರ ಹೊರ ಹಾಕಿದ್ದಾರೆ. ಚಿಕಿತ್ಸೆ ಪಡೆದು ಮನೆಗೆ ಬಂದಾಗ ಎಲ್ಲಾ ವಿಷಯ ತಿಳಿಯಿತು. ನಂತರ ತಂದೆ– ತಾಯಿಯನ್ನು ಮನೆಗೆ ಕರೆದುಕೊಂಡು ಬಂದೆ’ ಎಂದು ಹಿರಿಯ ಮಗ ನಯಾಜ್‌ ಪಾಷಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.