ADVERTISEMENT

ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಆಗ್ರಹ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 7:41 IST
Last Updated 22 ಆಗಸ್ಟ್ 2017, 7:41 IST
ಕಿಕ್ಕೇರಿಯಲ್ಲಿನ ಹೇಮಾವತಿ ನೀರಾವರಿ ಇಲಾಖೆ ಕಚೇರಿಗೆ ಸೋಮವಾರ ರೈತರು ಮುತ್ತಿಗೆ ಹಾಕಿ ಹೋಬಳಿಯ ಕೆರೆಕಟ್ಟೆಗಳಿಗೆ ನೀರು ತುಂಬಿಸುವಂತೆ ಪ್ರತಿಭಟನೆ ನಡೆಸಿದರು
ಕಿಕ್ಕೇರಿಯಲ್ಲಿನ ಹೇಮಾವತಿ ನೀರಾವರಿ ಇಲಾಖೆ ಕಚೇರಿಗೆ ಸೋಮವಾರ ರೈತರು ಮುತ್ತಿಗೆ ಹಾಕಿ ಹೋಬಳಿಯ ಕೆರೆಕಟ್ಟೆಗಳಿಗೆ ನೀರು ತುಂಬಿಸುವಂತೆ ಪ್ರತಿಭಟನೆ ನಡೆಸಿದರು   

ಕಿಕ್ಕೇರಿ: ಸರಿಯಾಗಿ ಮಳೆ ಬಾರದೆ ಕೆರೆ ಕಟ್ಟೆಗಳು ಒಣಗಿದ್ದು ಕನಿಷ್ಠ ಜಾನುವಾರುಗಳಿಗಾದರೂ ನೀರು ಕುಡಿಯಲು ಕೆರೆ ಕಟ್ಟೆ ತುಂಬಿಸಬೇಕು ಎಂದು ಆಗ್ರಹಿಸಿ ರೈತರು ಪಟ್ಟಣದ ಹೇಮಾವತಿ ನೀರಾವರಿ ಇಲಾಖೆ ಕಚೇರಿಯ ಮುಂದೆ ಜನಪ್ರತಿನಿಧಿಗಳೊಂದಿಗೆ ಸೋಮವಾರ ಜಮಾಯಿಸಿ ಪ್ರತಿಭಟನೆಗೆ ನಡೆಸಿದರು.

ಹೋಬಳಿಯಲ್ಲಿ ಅಮಾನಿಕೆರೆ, ವಡಕೆ ಕಟ್ಟೆ, ಗೋವಿಂದನಹಳ್ಳಿ ಕಟ್ಟೆಯಂತಹ ಹಲವಾರು ಕೆರೆಗಳಿದ್ದು, ಎರಡು ವರ್ಷಗಳಿಂದ ಕೆರೆಗೆ ನೀರಿಲ್ಲ. ಬೆಳೆ ಬೆಳೆಯುವುದಿರಲಿ, ಜಾನುವಾರುಗಳಿಗೂ ಕುಡಿಯಲು ನೀರಿಲ್ಲ. ರೈತರು ಗುಳೇ ಹೋಗುವ ಸಂಕಷ್ಟ ಎದುರಾಗಿದೆ. ಸಬೂಬು ಬಿಟ್ಟು, ಕೆರೆಗೆ ನೀರು ತುಂಬಿಸಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ಸಾಗಿದ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಶಾಸಕ ನಾರಾಯಣಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೋಡಿಮಾರನಹಳ್ಳಿ ದೇವರಾಜು, ಬಿ.ಎಲ್.ದೇವರಾಜು, ಮಾಜಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜು, ತಾಲೂಕು ಪಂಚಾಯಿತಿ ಸದಸ್ಯರಾದ ರವಿ, ಶಾಮಣ್ಣ, ಶಾರದಾ ಕೃಷ್ಣೇಗೌಡ, ಮಾಜಿ ಅಧ್ಯಕ್ಷ ಸುರೇಶ್, ಕಾಯಿ ಮಂಜೇಗೌಡ, ಚಂದ್ರಶೇಖರ್, ಅಣ್ಣಯ್ಯ, ಗೂಡೆಹೊಸಹಳ್ಳಿ ಜವರಾಯಿಗೌಡ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.