ADVERTISEMENT

ಕೆರೆ ಉಳಿದರೆ ರೈತರ ಅಭಿವೃದ್ಧಿ ಸಾಧ್ಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 10:27 IST
Last Updated 23 ಏಪ್ರಿಲ್ 2017, 10:27 IST

ಕೆರಗೋಡು: ಕೆರೆಯಲ್ಲಿ ನೀರು ಸಂಗ್ರಹವಾಗದಿರುವುದರಿಂದಲೇ ರೈತರ ಬದುಕು ಕಷ್ಟಕರವಾಗಿದೆ. ಆದ್ದರಿಂದ ಕೆರೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮಂಡ್ಯದ ತಹಶೀಲ್ದಾರ್ ಮಾರುತಿ ಪ್ರಸನ್ನ ಹೇಳಿದರು.ಸಮೀಪದ ಹಲ್ಲೇಗೆರೆ ಗ್ರಾಮದ ಕೆರೆ ಅಭಿವೃದ್ಧಿ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಚಂದಗಾಲು ಶಿವಣ್ಣ , ಮಂಡ್ಯದ ಆರ್ಗ್ಯಾನಿಕ್‌ ಸಂಸ್ಥೆ ಅಧ್ಯಕ್ಷ ಎಸ್.ಸಿ.ಮಧುಚಂದನ್ ಮಾತನಾಡಿದರು.

ಹೇಮಂತ್ ಕುಮಾರ್, ಮಿಲಿಟರಿ ಹೋಟೆಲ್ ಮಾಲೀಕ ರಮೇಶ್, ಆರ್ಗ್ಯಾನಿಕ್ ಮಧುಚಂದನ್, ಚಂದಗಾಲು ಅಭಿಷೇಕ್, ಹಲ್ಲೇಗೆರೆ ಗ್ರಾಮಲೆಕ್ಕಾಧಿಕಾರಿ ಶ್ರೀಕಾಂತ್,  ನಾಡಕಚೇರಿ ಉಪ ತಹಶೀಲ್ದಾರ್ ಮಂಚಯ್ಯ, ಕಂದಾಯ ನಿರೀಕ್ಷಕ ಶಂಕರ್, ಪಿಡಿಒ ನವೀನ್, ಟಿ. ದೊಡ್ಡಿ ಸತೀಶ್, ಬ್ಯಾಂಕ್ ಹನುಮಂತಯ್ಯ ದೇಣಿಗೆ ನೀಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಜೇಶ್ವರಿ ಅಂದಾನಿ ಗೌಡ, ಮಂಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ದೇವರಾಜು, ಮಾಜಿ ಅಧ್ಯಕ್ಷ ಸಿದ್ದೇಗೌಡ, ರೈತರ ಸೊಸೈಟಿ ಮಾಜಿ ಅಧ್ಯಕ್ಷ ಎ.ಎಸ್. ದೇವರಾಜು, ಮುಖಂಡರಾದ ಕರೀಗೌಡ, ದ್ಯಾಪಸಂದ್ರ ಶಂಕರಲಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT