ADVERTISEMENT

ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2016, 8:33 IST
Last Updated 21 ಮಾರ್ಚ್ 2016, 8:33 IST

ಭಾರತೀನಗರ: ಮೈಸೂರು ವಿಶ್ವವಿದ್ಯಾನಿಲಯದ 2015-–16 ನೇ ಸಾಲಿನ ವಿವಿಧ ಕ್ರೀಡೆಗಳಲ್ಲಿ ಇಲ್ಲಿನ  ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಶನಿವಾರ ಪ್ರಾಂಶುಪಾಲ ಕೆ. ನಾಗಾನಂದ್‌ ಗೌರವಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಮಾಂಡವ್ಯ ವಲಯ ಮಟ್ಟದ ಬಾಲಕಿಯರ ರಿಂಗ್ ಎಸೆತ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ, ಬಾಲಕರ ಕೊಕ್ಕೊ ಹಾಗೂ ಸ್ಟಾಪ್ ಬಾಲ್ ಟೂರ್ನಿಯಲ್ಲಿ ಕಾಲೇಜಿನ ತಂಡವು ದ್ವಿತೀಯ ಸ್ಥಾನ ಗಳಿಸಿದ್ದಾರೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯ ಮಾಂಡವ್ಯ ಅಂತರವಲಯ ಮಟ್ಟದ ಬಾಲಕಿಯರ ತಂಡ ರಿಂಗ್ ಎಸೆತ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ, ಮತ್ತು ಬಾಲಕರ ತಂಡ ಸ್ಟಾಪ್ ಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದರು.

2015–-16ನೇ ಸಾಲಿನಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಕುಸ್ತಿ ಪಂದ್ಯಾವಳಿಯಲ್ಲಿ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಾದ ಸಿ. ರಾಧಾ, ಕೆ. ಲಕ್ಷ್ಮೀ, ಎ.ವಿ. ನಿಸರ್ಗಾ, ಎಸ್. ಅಮೃತಾ ಮೈಸೂರು ವಿಶ್ವವಿದ್ಯಾನಿಲಯದಿಂದ ವಿವಿಧ ಭಾಗಗಳಲ್ಲಿ ಪ್ರತಿನಿಧಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ವಿವರಿಸಿದರು.

ಕಾಲೇಜಿನ ಕ್ರೀಡಾ ಸಮಿತಿ ಸದಸ್ಯ ಕೆ.ಆರ್. ಲೋಕೇಶ್, ಎಸ್. ನವೀನ್, ಡಿ. ಜ್ಯೋತಿ, ರಶ್ಮಿ,  ಜಿ.ಟಿ. ರಾಮಕೃಷ್ಣ, ಅಣ್ಣೂರು ಲಕ್ಷ್ಮಣ್ ಹಾಗೂ ಇತರ ಬೋಧಕ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.