ADVERTISEMENT

ಖಾಸಗಿಯವರಿಗೆ ವಹಿಸದಂತೆ ಆಗ್ರಹ

ಆರತಿ ಉಕ್ಕಡ ದೇವಸ್ಥಾನದ ಹಿಂದಿನ ಟ್ರಸ್ಟ್‌ ಅವ್ಯವಹಾರ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 9:23 IST
Last Updated 2 ಮಾರ್ಚ್ 2017, 9:23 IST

ಮಂಡ್ಯ: ‘ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಆರತಿ ಉಕ್ಕಡ ಅಹಲ್ಯಾ ದೇವಿ ಮಾರಮ್ಮನ ದೇವಸ್ಥಾನವನ್ನು ಖಾಸಗಿಯವರಿಗೆ ವಹಿಸಬಾರದು. ಹಿಂದಿನ ಟ್ರಸ್ಟ್‌ ಹಣ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಎನ್‌.ನಂಜೇಗೌಡ ಆಗ್ರಹಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಟ್ರಸ್ಟ್‌ ಹಣ ದುರುಪಯೋಗ ಮಾಡಿಕೊಂಡಿ ರುವ ವರದಿ ಆಧಾರದ ಮೇಲೆಯೇ ಮುಜರಾಯಿ ಇಲಾಖೆಗೆ ದೇವಸ್ಥಾನ ವಹಿಸಲಾಗಿದೆ. ಆದರೆ, ಬೇರೆ ಸಮಿತಿ ಹೆಸರಿನಲ್ಲಿ ಪಡೆಯಲು ಕೆಲವರು ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಖಾಸಗಿ ಯವರಿಗೆ ವಹಿಸುವಂತೆ ರೈತ ಸಂಘದ ಹೆಸರಿನಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದಿ ರುವುದು ಖಂಡನೀಯ. ಹಸಿರು ಟವೆಲ್‌ ಹಾಕಿ ಕೊಂಡು ಅನ್ಯಾಯದ ವಿರುದ್ಧ ಹೋರಾಡಬೇಕು. ಅವರು ಹಾಗೆ ಹೇಳ ಬಾರ ದಿತ್ತು. ಹಿಂದೆ ಕೆಲಸ ಮಾಡುತ್ತಿ ದ್ದವರು ಈಗಲೂ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

2013ರಲ್ಲಿ ದೇವಸ್ಥಾನವನ್ನು ಸರ್ಕಾರ ವಹಿಸಿಕೊಂಡ ಮೇಲೆ ₹ 3.60 ಕೋಟಿ ಆದಾಯ ಬಂದಿದೆ. ಅದರಲ್ಲಿ ₹ 1.68 ಕೋಟಿ ಖರ್ಚು ಮಾಡಲಾಗಿದ್ದು, ₹ 1.92 ಕೋಟಿ ಸರ್ಕಾರಕ್ಕೆ ಆದಾಯ ವಾಗಿದೆ. ಹಿಂದಿನ ಟ್ರಸ್ಟ್‌ನವರು 20 ವರ್ಷದಲ್ಲಿ ಕೇವಲ ₹ 2.60 ಕೋಟಿ ಆದಾಯ ಬಂದಿದೆ ಎಂದು ತಪ್ಪು ಲೆಕ್ಕ ತೋರಿಸಿದ್ದಾರೆ. ಜತೆಗೆ, ಎಲ್ಲ ಹಣವನ್ನೂ ಖರ್ಚು ಮಾಡಲಾಗಿದೆ ಎಂದಿದ್ದಾರೆ ಎಂದು ದೂರಿದರು.

ಆದಾಯ ಹಾಗೂ ಖರ್ಚು, ಬ್ಯಾಂಕ್‌ ವ್ಯವಹಾರದ ಬಗ್ಗೆ ದಾಖಲೆ ನೀಡಿಲ್ಲ. ಸಿಬ್ಬಂದಿ ನಿಯೋಜನೆಯ ದಾಖಲೆಗಳೂ ಇಲ್ಲ. ದೇವರ ಹೆಸರಿನಲ್ಲಿ ಭೂಮಿ ಖರೀಸಿದಿಸಲಾಗಿದ್ದು, ಅದೂ ಕ್ರಮಬದ್ಧ ವಾಗಿರುವುದಿಲ್ಲ ಎಂದು ವರದಿ ಇದೆ. ಆದರೂ, ಅವರಿಗೆ ಕೊಡಿಸಲು ಯತ್ನಿಸು ತ್ತಿರುವುದು ಸರಿಯಲ್ಲ ಎಂದು ಅವರು  ಟೀಕಿಸಿದರು.

ತಡೆ, ಮೊಟ್ಟೆ ಹೊಡೆಯುವುದನ್ನು ಮುಜರಾಯಿ ಇಲಾಖೆ ಅಧಿಕಾರಿಗಳು ಮಾಡುತ್ತಿಲ್ಲ. ಖಾಸಗಿಯವರ ಕೈಯ ಲ್ಲಿದೆ. ಅದನ್ನೂ ಇಲಾಖೆ ವತಿಯಿಂದಲೇ ಮಾಡಬೇಕು. ಯಾವುದೇ ರೀತಿಯಿಂದ ಭಕ್ತರ ಸುಲಿಗೆಯಾದಂತೆ ನೋಡಿಕೊಳ್ಳ ಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಕೆ.ಬೋರಯ್ಯ ಮಾತನಾಡಿ, ಖಾಸಗಿಯವರಿಗೆ ವಹಿಸ ಬಾರದು. ಹಿಂದಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು. ಇಲ್ಲದಿದ್ದರೆ, ಲೋಕಾಯುಕ್ತದ ಮೊರೆ ಹೋಗಲಾಗು ವುದು. ಅವಶ್ಯಕತೆ ಬಿದ್ದರೆ ನ್ಯಾಯಾಲಯ ಮೊರೆಯನ್ನೂ ಹೋಗಲಾಗುವುದು ಎಂದು ಹೇಳಿದರು.

ಸರ್ಕಾರವು ದೇವಸ್ಥಾನ ಅಭಿವೃದ್ಧಿಗೆ ಅವಶ್ಯವಿರುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಬಿ. ಕೃಷ್ಣಪ್ರಕಾಶ್‌, ಮುದ್ದೇಗೌಡ, ಕಿರಂಗೂರು ಪಾಪು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.