ADVERTISEMENT

ಪ್ರಪಾತದೊಳಗೆ ಎರಡು ದಿನ ಬದುಕಿದ ಪ್ರವಾಸಿಗ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 5:41 IST
Last Updated 28 ನವೆಂಬರ್ 2017, 5:41 IST
ಮಳವಳ್ಳಿ ತಾಲ್ಲೂಕು, ಗಗನಚುಕ್ಕಿ ಜಲಪಾತದ ಪ್ರಪಾತದೊಳಗೆ ಬಿದ್ದು ಎರಡು ದಿನದ ನಂತರ ಪತ್ತೆಯಾದ ಖಾದರ್‌ ಅವರನ್ನು ಮೇಲಕ್ಕೆ ತರುತ್ತಿರುವುದು
ಮಳವಳ್ಳಿ ತಾಲ್ಲೂಕು, ಗಗನಚುಕ್ಕಿ ಜಲಪಾತದ ಪ್ರಪಾತದೊಳಗೆ ಬಿದ್ದು ಎರಡು ದಿನದ ನಂತರ ಪತ್ತೆಯಾದ ಖಾದರ್‌ ಅವರನ್ನು ಮೇಲಕ್ಕೆ ತರುತ್ತಿರುವುದು   

ಮಳವಳ್ಳಿ: ತಾಲ್ಲೂಕಿನ ಗಗನಚುಕ್ಕಿ ಜಲಪಾತದ ಕೆಳಗಿಳಿಯಲು ಯತ್ನಿಸಿ ಪ್ರಪಾತದೊಳಗೆ ಬಿದ್ದು ಎರಡು ದಿನ ಮೇಲೆ ಬರಲಾಗದೆ ಪವಾಡ ಸದೃಶವಾಗಿ ಬದುಕುಳಿದಿದ್ದ ವ್ಯಕ್ತಿಯೊಬ್ಬರನ್ನು ಸೋಮವಾರ ರಕ್ಷಣೆ ಮಾಡಲಾಗಿದೆ.

ಬೆಂಗಳೂರಿನ ಕದಿರೇನಹಳ್ಳಿ ನಿವಾಸಿ ಖಾದರ್ ಪಾಷಾ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಶನಿವಾರ ಬಸ್‌ನಲ್ಲಿ ಒಬ್ಬರೇ ಬಂದಿದ್ದು, ಜಲಪಾತದ ಕೆಳಗೆ ಇಳಿಯುವಾಗ ಆಕಸ್ಮಿಕವಾಗಿ ಪ್ರಪಾತದೊಳಗೆ ಬಿದ್ದಿದ್ದಾರೆ. ನೀರಿನೊಳಗೆ ಬೀಳದೆ ಕಲ್ಲಿನ ಮೇಲೆ ಬಿದ್ದು ಗಾಯಗೊಂಡು ಎರಡು ದಿನ ಅಲ್ಲೇ ನೀರು ಕುಡಿದು ಬದುಕಿದ್ದಾರೆ. ಸೋಮವಾರ ಪ್ರಪಾತದೊಳಗೆ ತಮ್ಮ ಜರ್ಕಿನ್‌ ಬೀಸುತ್ತಾ ಚೀರಾಡುತ್ತಿದ್ದಾಗ ಧ್ವನಿಯನ್ನು ಕೇಳಿಸಿಕೊಂಡ ಪ್ರವಾಸಿಗರು ಪೊಲೀಸರ ಗಮನಕ್ಕೆ ತಂದಿದ್ದಾರೆ.

ಸ್ಥಳಕ್ಕೆ ಬಂದ ಬೆಳಕವಾಡಿ ಪೊಲೀಸರು, ಸ್ಥಳೀಯರ ನೆರವಿನೊಂ ದಿಗೆ ಮೇಲೆ ತರುವಲ್ಲಿ ಯಶಸ್ವಿಯಾದರು. ನಂತರ ತಾಲ್ಲೂಕು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.