ADVERTISEMENT

ಬೀದಿನಾಯಿಗಳ ಹಾವಳಿ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 8:52 IST
Last Updated 9 ನವೆಂಬರ್ 2017, 8:52 IST

ಕಿಕ್ಕೇರಿ: ಪಟ್ಟಣದ ಯಾವುದೇ ರಸ್ತೆಯಲ್ಲಿ ಹೋದರೂ ನಾಯಿಗಳ ಹಿಂಡು ಕಾಣುತ್ತಿದೆ. ಮಕ್ಕಳು, ವಯೋವೃದ್ಧರು ಓಡಾಡುವುದು ಕಷ್ಟವಾಗಿದೆ. ಅಷ್ಟೇ ಅಲ್ಲ ವಾಹನ ಸವಾರರನ್ನೂ ಬೆನ್ನು ಹತ್ತುತ್ತಿವೆ.

ಹಿಂಡಾಗಿ ಒಟ್ಟಿಗೆ ನಾಯಿಗಳು ಎಲ್ಲ ನಡುಬೀದಿಗಳಲ್ಲಿಯೇ ಇರುವುದರಿಂದ ಓಡಾಡುವುದೇ ಕಷ್ಟ. ಬೆಳಿಗ್ಗೆ ವಾಯುವಿಹಾರಕ್ಕೆ ತೆರಳುವವರ ಫಜೀತಿ ಹೇಳತೀರದಾಗಿದೆ. ಕೆಲವರಿಗೆ ಕಚ್ಚಿದ ಉದಾಹರಣೆಗಳಿವೆ.

ಮಾಂಸ, ಹೋಟೆಲ್‌ಗಳ ತಿಂಡಿ ತಿಂದು ಬಸ್‌ನಿಲ್ದಾಣ, ಎಪಿಎಂಸಿ ಮಾರುಕಟ್ಟೆ, ಖಾಲಿ ನಿವೇಶನಗಳಲ್ಲಿ ಬೀಡುಬಿಟ್ಟಿರುತ್ತಿವೆ. ಚರಂಡಿಗಳಲ್ಲಿ ಬಿದ್ದು ಹೊರಳಾಡುತ್ತಿರುತ್ತವೆ. ಜನರು ಕೈಯಲ್ಲಿ ತಿಂಡಿ, ಚೀಲ ಹಿಡಿದು ಹೊರಟರೆ ದಾಳಿ ಮಾಡುತ್ತಿವೆ. ಮನೆಯ ಮುಂದೆ ಕಟ್ಟಿದ ದನ–ಕರುಗಳ ಮೇಲೆ ಹಿಂಡುಗಟ್ಟಲೆ ಬಂದು ದಾಳಿ ಮಾಡಿ ಗಾಯಗೊಳಿಸಿದ ಪ್ರಕರಣಗಳು ಉಂಟು.

ADVERTISEMENT

ಇಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಡಿತದ ಲಸಿಕೆ ಇಲ್ಲದ ಕಾರಣ ನಾಯಿ ಕಡಿತಕ್ಕೆ ಒಳಗಾದವರು ತಾಲ್ಲೂಕು ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ಗ್ರಾಮ ಪಂಚಾಯಿತಿಯವರು ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸುವುದರ ಜತೆಗೆ ಅರಣ್ಯ ಪ್ರದೇಶಗಳಿಗೆ ಸಾಗಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.