ADVERTISEMENT

ಮಣಪ್ಪುರಂ ಫೈನಾನ್ಸ್‌ ವಿರುದ್ಧ ರೈತಸಂಘ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಮೇ 2017, 5:36 IST
Last Updated 27 ಮೇ 2017, 5:36 IST

ಮಂಡ್ಯ: ಮಣಪ್ಪುರಂ ಫೈನಾನ್ಸ್‌ನವರು ಗಿರವಿಟ್ಟ ರೈತರ ಒಡವೆ ಹರಾಜು ಹಾಕುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ನಗರದ ಹೊಳಲು ವೃತ್ತದ ಬಳಿ ಇರುವ ಮಣಪ್ಪುರಂ ಫೈನಾನ್ಸ್‌ ಎದುರು ಶುಕ್ರವಾರ ಪ್ರತಿಭಟನೆ ಮಾಡಿದರು.

ಹೊಳಲು ಗ್ರಾಮದ ರೈತರಾದ ಚೇತನ್‌, ದರ್ಶನ್‌ ಅವರ ಒಡವೆಗಳನ್ನು ಮಣಪ್ಪುರಂ ಫೈನಾನ್ಸ್‌ನವರು  ಹರಾಜು ಹಾಕಿದ್ದಾರೆ. ಆದರೆ, ಇದರಿಂದ ನೊಂದ ರೈತರು ನಮಗೆ ಅವಮಾನ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಹಾಗೇನಾದರು ಆದರೆ ಮಣಪ್ಪುರಂ ಸಂಸ್ಥೆಯೇ  ನೇರ ಹೊಣೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಬರಗಾಲ ಇದೆ. ಬೆಳೆ ಕೂಡ ಈ ಬಾರಿ ಆಗಿಲ್ಲ. ರೈತ ಇನ್ನಷ್ಟು ಕಂಗಾಲಾಗಿದ್ದಾನೆ. ಇದನ್ನು ಅರ್ಥ ಮಾಡಿಕೊಳ್ಳದ ಸಹಕಾರಿ, ಖಾಸಗಿ ಬ್ಯಾಂಕ್‌ಗಳು ರೈತರು ಗಿರವಿ ಇಟ್ಟ ಇಟ್ಟ ಒಡವೆ ಹರಾಜು ಹಾಕಲು ಹೊರಟಿರುವ ಕ್ರಮ ಸರಿಯಿಲ್ಲ. ಇದು ತಕ್ಷಣ ನಿಲ್ಲಬೇಕು ಎಂದು ಒತ್ತಾಯಿಸಿದರು.

ADVERTISEMENT

ಫೈನಾನ್ಸ್‌ ಅಧಿಕಾರಿಗಳಾದ ಪ್ರಸಾದ್‌, ಮಧುಸೂದನ್‌ ಹರಾಜು ಹಾಕಿರುವ ಒಡವೆ ವಾಪಸ್‌ ಕೊಡಿಸಲಾ ಗುವುದು ಎಂದು ಹೇಳಿದರು. ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಣಕನಹಳ್ಳಿ ನಾಗಣ್ಣ, ಕೋಣನ ಹಳ್ಳಿ ಜವರೇಗೌಡ, ನಾಗರಾಜು ಹೊಳಲು, ಕನ್ನಲಿ ನವೀನ್‌್, ಚೇತನ್‌, ಜಗದೀಶ್‌ ಮತ್ತಿತರರ ಭಾಗವಹಿಸಿದ್ದರು.

ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಎಚ್ಚರಿಕೆ:  ಜಿಲ್ಲೆಯಲ್ಲಿ ರೈತರು ಆರ್ಥಿಕ ಸಂಕಷ್ಟದಲ್ಲಿ ದ್ದಾರೆ.  ಬರಗಾಲದಿಂದ ತತ್ತರಿಸಿದ್ದಾರೆ. ಇಂತಹ ಹೊತ್ತಿನಲ್ಲಿ ರೈತರು ಗಿರವಿ ಇಟ್ಟ ಒಡವೆಗಳನ್ನು ಹರಾಜು ಮಾಡುವುದು ಸರಿಯಲ್ಲ. ಇನ್ನು ಮುಂದೆ ಇಂತಹ ತಪ್ಪು ನಡೆಯಕೂಡದು, ನಡೆದರೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.