ADVERTISEMENT

ಮದ್ದೂರಮ್ಮ ಕೆರೆಗೆ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 9:00 IST
Last Updated 13 ಸೆಪ್ಟೆಂಬರ್ 2017, 9:00 IST
ಮದ್ದೂರು ಸಮೀಪದ ದೇಶಹಳ್ಳಿಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ಮದ್ದೂರಮ್ಮ ಕೆರೆಗೆ ಡಾ ಆನಂದ ಗುರೂಜಿ ಮಂಗಳವಾರ ಬಾಗಿನ ಅರ್ಪಿಸಿದರು
ಮದ್ದೂರು ಸಮೀಪದ ದೇಶಹಳ್ಳಿಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ಮದ್ದೂರಮ್ಮ ಕೆರೆಗೆ ಡಾ ಆನಂದ ಗುರೂಜಿ ಮಂಗಳವಾರ ಬಾಗಿನ ಅರ್ಪಿಸಿದರು   

ಮದ್ದೂರು: ಸಮೀಪದ ದೇಶಹಳ್ಳಿಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ಮದ್ದೂರಮ್ಮ ಕೆರೆಗೆ ಡಾ.ಆನಂದ ಗುರೂಜಿ ಬಾಗಿನ ಅರ್ಪಿಸಿದರು.
ಬಳಿಕ ಮಾತನಾಡಿದ ಅವರು, ತೀವ್ರ ಬರಗಾಲದಿಂದಾಗಿ ತಾಲ್ಲೂಕಿನಲ್ಲಿಯೆ ಅತಿ ದೊಡ್ಡ 2ನೇ ಕೆರೆ ಎನಿಸಿದ ಮದ್ದೂರಮ್ಮ ಕೆರೆ ನೀರಿಲ್ಲದೇ ಬತ್ತಿ ಹೋಗಿತ್ತು. 

ಕೆ.ಆರ್‌.ಎಸ್‌ ಜಲಾಶಯದಿಂದ ಕೆರೆಗೆ ನೀರು ಬಿಡುಗಡೆಗೆ ಆಗ್ರಹಿಸಿ ಜನಪರ ವೇದಿಕೆ 34 ದಿನಗಳ ಕಾಲ ಕೆರೆಯಂಗಳದಲ್ಲಿ ಅಹೋರಾತ್ರಿ ಧರಣಿ ನಡೆಸಿತ್ತು. ಅದರಂತೆ ರಾಜ್ಯ ಸರ್ಕಾರ ಜಲಾಶಯದಿಂದ ನೀರು ಬಿಡುಗಡೆ ಮಾಡಿದೆ. ಇದೀಗ ಕೆರೆ ಪೂರ್ಣ ತುಂಬಿರುವ ಕಾರಣ ಕೆರೆಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಅಲ್ಲದೇ ಹೋರಾಟದಲ್ಲಿ ಭಾಗಿಯಾದ ಹೆಂಗಳೆಯರಿಗೆ ರವಿಕೆ ಕಣ, ಬಾಗಿನ ನೀಡಿ ಗೌರವಿಸಲಾಗುತ್ತಿದೆ ಎಂದರು.

ವೇದಿಕೆ ರಾಜ್ಯ ಘಟಕ ಅಧ್ಯಕ್ಷ ಕೆ.ರಮೇಶಗೌಡ, ಜಿಲ್ಲಾ ಘಟಕ ಅಧ್ಯಕ್ಷ ವಿ.ಸಿ.ಉಮಾಶಂಕರ್, ತಾಲ್ಲೂಕು ಘಟಕ ಅಧ್ಯಕ್ಷ ತಿಪ್ಪೂರು ರಾಜೇಶ್, ಸದಸ್ಯರಾದ ಗುಂಡಮಹೇಶ್, ಚನ್ನಪ್ಪ, ಗೋಪಾಲಕೃಷ್ಣ, ಸುರೇಶ್, ಸತೀಶ್, ಚೌಡಪ್ಪ, ಶಂಕರ್, ರವಿ, ದೇಶಹಳ್ಳಿ ರೈತ ಮಿತ್ರಕೂಟ, ವಳಗೆರೆಹಳ್ಳಿ ಸ್ನೇಹ ಜೀವಿ ಗೆಳೆಯರ ಬಳಗದ ಸದಸ್ಯರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.