ADVERTISEMENT

ಮದ್ದೂರು: ವಿವಿಧೆಡೆ ಅಂಬೇಡ್ಕರ್‌ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 5:45 IST
Last Updated 16 ಏಪ್ರಿಲ್ 2017, 5:45 IST

ಮದ್ದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.ತೈಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಚರಿಸಿದ ಜಯಂತಿಯಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷಕ ಕೆ.ಪಿ.ನಾಗೇಶ್‌, ಶಿಕ್ಷಕರಾದ ಸವಿತಾ, ವಸಂತಕುಮಾರ್‌, ಲಕ್ಷ್ಮಿ,  ದೇವಿಕಾ, ಕಾಂತರಾಜು, ಕಾವೇರಿ, ಸುಜಾತ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರದ ಚಂದ್ರಶೇಖರ್, ಶಿಕ್ಷಕರಾದ ವೆಂಕಟೇಶ್‌, ರಮೇಶ್‌, ಜಯಮ್ಮ, ರವೀಶ್‌ ಇದ್ದರು.

ಗ್ರಾಮದ  ಜೈ ಭೀಮ್ ಯುವಕರ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡ ಹನುಮಂತು ಅಂಬೇಡ್ಕರ್‌ ಬದುಕು ಸಾಧನೆ ಕುರಿತು ಮಾತನಾಡಿದರು. ಪದಾಧಿಕಾರಿಗಳಾದ ಟಿ.ಎ.ಸ್ವಾಮಿ, ಸೋಮಣ್ಣ, ಪ್ರಸನ್ನ, ಶಿವಣ್ಣ, ಹನುಮಂತು ಇದ್ದರು.

ನಿಡಘಟ್ಟದ ಗ್ರಾ.ಪಂ. ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಅಧ್ಯಕ್ಷೆ ಸುಂದರಮ್ಮ ಚಾಲನೆ ನೀಡಿದರು. ಪಿಡಿಒ ಬಸವರಾಜು, ಗ್ರಾ.ಪಂ. ಸದಸ್ಯರು, ಸಿಬ್ಬಂದಿ ಇದ್ದರು.ಇಲ್ಲಿನ  ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯಶಿಕ್ಷಕಿ ರಾಜಮ್ಮಣ್ಣಿ ಚಾಲನೆ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದನ್‌, ಅನಿತಾ, ಜಯಲಕ್ಷ್ಮಿ, ಕೆ.ಆರ್‌.ಪ್ರೀತಿ, ನಾಗಾಂಬಿಕಾ, ಕಸ್ತೂರಿಬಾ ಇದ್ದರು.

ADVERTISEMENT

ಆಲೂರಿನಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಜಯಂತಿಗೆ ಮುಖ್ಯಶಿಕ್ಷಕ ಟಿ.ಎಚ್‌.ಶಿವಣ್ಣ  ಚಾಲನೆ ನೀಡಿದರು. ಶಿಕ್ಷಕರಾದ ಜಿ.ಜೆ.ಸುರೇಶ್‌, ಬಿ.ಎಸ್‌.ಮಹದೇವಸ್ವಾಮಿ, ಮಧುಸೂದನ, ಕುಮಾರ್‌, ಶ್ರೀನಿವಾಸ್‌, ಸವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.