ADVERTISEMENT

ಮೊಬೈಲ್‌ನಿಂದ ನಶಿಸುತ್ತಿರುವ ಸಂಬಂಧ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:38 IST
Last Updated 6 ಫೆಬ್ರುವರಿ 2017, 5:38 IST

ಮಂಡ್ಯ: ಮೊಬೈಲ್‌ ಬಂದ ಮೇಲೆ ಮಾನವೀಯ ಸಂಬಂಧಗಳು ನಶಿಸುತ್ತಿವೆ ಎಂದು ಸಮ್ಮೇಳನಾಧ್ಯಕ್ಷ ಎ.ಎನ್‌. ರಮೇಶ್‌ ಗುಬ್ಬಿ ಹೇಳಿದರು.

ನಗರದಲ್ಲಿ ಜಿ.ಶಂ.ಪ ಸಾಹಿತ್ಯ ವೇದಿಕೆ, ಕನ್ನಂಬಾಡಿ ದಿನಪತ್ರಿಕೆ, ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ವಿವಿಧ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯಮಟ್ಟದ ಕವಿ ಕಾವ್ಯಮೇಳ ದಲ್ಲಿ ಅವರು ಮಾತನಾಡಿದರು.

ಮೊಬೈಲ್‌ ಲೋಕದಲ್ಲಿ ಮುಳುಗಿದ ಮೇಲೆ ಸಂಬಂಧಗಳು ಸಡಿಲಗೊಂಡಿವೆ. ಸಂಬಂಧಗಳನ್ನು ಬೆಸೆಯುವ, ಬೆಳೆಸುವ ಕೆಲಸ ಆಗಬೇಕಿದೆ ಎಂದರು.
ಕಾವ್ಯ, ಕತೆ, ಕಾದಂಬರಿ ಸೇರಿದಂತೆ ಸಾಹಿತ್ಯ ಕ್ಷೇತ್ರಕ್ಕೆ ಮಂಡ್ಯ ಜಿಲ್ಲೆಯ ಕೊಡುಗೆ ದೊಡ್ಡದಾಗಿದೆ. ನಾಡು, ನುಡಿಯ ಕೀರ್ತಿಯನ್ನು ಸಾಹಿತಿಗಳು ಬೆಳಗಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿದ ಎಚ್‌. ಮಹದೇವ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು, ಹೆಚ್ಚು ಜನರು ಭಾಗವಹಿಸಬೇಕು ಎಂದರು.
ಹಿರಿಯ ಪತ್ರಕರ್ತ ಮತ್ತೀಕೆರೆ ಜಯ ರಾಂ ಮಾತನಾಡಿ, ಕಳೆದ ಎರಡು ದಶಕ ದಿಂದ ವೇದಿಕೆ ವತಿಯಿಂದ ನಾಡು, ನುಡಿ ಕಟ್ಟುವ ಕಾರ್ಯಕ್ರಮ ಮಾಡಿ ಕೊಂಡು ಬರಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಟಿ. ಮಹದೇವಸ್ವಾಮಿ ಮಾತನಾಡಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಸನ್ಮಾನಿಸುತ್ತಿ ರುವುದು ಒಳ್ಳೆಯ ಕೆಲಸ ಎಂದರು.

ಕಾರ್ಯಕ್ರಮವನ್ನು ಕೆ.ಆರ್‌.ಪೇಟೆ ಅರವಿಂದ್‌ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್‌್ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆ ಅಧ್ಯಕ್ಷ ಕೃಷ್ಣಸ್ವರ್ಣಸಂದ್ರ, ಪ್ರಧಾನ ಕಾರ್ಯದರ್ಶಿ ಪಿ. ಲೋಕೇಶ್‌ ಚಂದಗಾಲು, ಕನ್ನಡ ಸೇನೆ ಅಧ್ಯಕ್ಷ ಎಚ್‌.ಸಿ.ಮಂಜುನಾಥ್ ಇದ್ದರು. ನಂತರ ಕವಿಕಾವ್ಯ ಮೇಳ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.