ADVERTISEMENT

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 5:40 IST
Last Updated 24 ಏಪ್ರಿಲ್ 2017, 5:40 IST
ಕೊಪ್ಪ ಸಮೀಪದ ಈರೇಗೌಡನದೊಡ್ಡಿ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವುದು
ಕೊಪ್ಪ ಸಮೀಪದ ಈರೇಗೌಡನದೊಡ್ಡಿ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವುದು   

ಕೊಪ್ಪ: ಬೆಸಗರಹಳ್ಳಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಈರೇಗೌಡನದೊಡ್ಡಿ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಸುಮಾರು 3 ತಿಂಗಳು ಕಳೆದರೂ ಇಲ್ಲಿಯವರೆಗೂ ದುರಸ್ತಿಗೊಂಡಿಲ್ಲ.

ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಈರೇಗೌಡನದೊಡ್ಡಿ ಗ್ರಾಮಸ್ಥರು ಶುದ್ಧ ನೀರಿಗಾಗಿ ಪರದಾಡಬೇಕಾದ ಅನಿರ್ವಾ ಯತೆ ಎದುರಾಗಿದೆ. ಇದರ ಜತೆಗೆ, ಈ ಘಟಕದಲ್ಲಿನ ಕಾಯಿನ್‌ ಬಾಕ್ಸ್ ಸೇರಿ ದಂತೆ ಕೆಲವು ವಸ್ತುಗಳು ಕಳ್ಳತನ ವಾಗಿದ್ದು,  ಬೆಸಗರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ₹ 2ಕ್ಕೆ 20 ಲೀಟರ್‌ ನೀರು ಸಿಗುತ್ತಿತ್ತು. ಆದರೆ, ಇದು ಕೆಟ್ಟಿರುವುದರಿಂದ ತೊಂದರೆಯಾಗಿದೆ. ಖಾಸಗಿ ಘಟಕದಲ್ಲಿ ₹ 10 ಪಾವತಿಸಿ 20 ಲೀಟರ್‌ ನೀರು ಪಡೆಯಬೇಕಾದ ಅನಿರ್ವಾಯತೆ ಎದುರಾಗಿದೆ. ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. 4–5 ದಿನಗಳಿಗೊಮ್ಮೆ ಕೇವಲ 30 ನಿಮಿಷ ನೀರು ಬಿಡುತ್ತಾರೆ. ಇದರಿಂದ ಮನೆಗೆ ಬೇಕಾಗುವಷ್ಟು ಹಿಡಿದುಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಮಸ್ಥ ನಂದೀಶ್ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಲ್‌.ಸುಮಲತಾ ಮಾತನಾಡಿ, ‘ಈ ಘಟಕಕ್ಕೆ ನೀರು ಸರಬರಾಜು ಮಾಡುವ ಕೊಳವೆಬಾವಿ ಅವಶ್ಯಕತೆ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬೆಸಗರಹಳ್ಳಿ ಅಡ್ಡರಸ್ತೆ ಗ್ರಾಮದ ಜನತೆಗೂ ನೀರು ಕೊಡಿ ಎಂದು ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿರುವುದರಿಂದ ಈರೇಗೌಡನ ದೊಡ್ಡಿ ಗ್ರಾಮ ದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಮರ್ಪಕವಾಗಿ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾ ಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.