ADVERTISEMENT

ಸಮಾಜ ಕಲ್ಯಾಣ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ

ಬಸವರಾಜ ಹವಾಲ್ದಾರ
Published 18 ಮಾರ್ಚ್ 2017, 9:29 IST
Last Updated 18 ಮಾರ್ಚ್ 2017, 9:29 IST
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯದ ಶೌಚಾಲಯಗಳ ಸ್ಥಿತಿ
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯದ ಶೌಚಾಲಯಗಳ ಸ್ಥಿತಿ   

ಮಂಡ್ಯ: ಹಿಂದುಳಿದ ಹಾಗೂ  ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಂತೆಯೇ ಸಮಾಜ ಕಲ್ಯಾಣ ಇಲಾಖೆಯಲ್ಲಿಯೂ ಕಚೇರಿ ಹಾಗೂ ವಿದ್ಯಾರ್ಥಿನಿಲಯಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಅದರಿಂದಾ ಗಿಯೇ ಹಲವೆಡೆ ಕೆಲವು ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ.

ನಿಲಯಪಾಲಕರ, ಅಡುಗೆ ಮಾಡುವ ವರು, ಅಡುಗೆ ಸಹಾಯಕರು, ಕಾವಲು ಗಾರರು ಸೇರಿದಂತೆ ಬಹುತೇಕ ಹುದ್ದೆಗಳು ಖಾಲಿ ಇವೆ. ಅದರಲ್ಲೂ ಮುಖ್ಯವಾಗಿ ಅಡುಗೆ ಮಾಡುವವರು ಹಾಗೂ ಅವರ ಸಹಾಯಕರ ಹುದ್ದೆಗಳು ದೊಡ್ಡ ಸಂಖ್ಯೆಯಲ್ಲಿಯೇ ಖಾಲಿ ಇವೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಟ್ಟು 458 ಮಂದಿ ಸಿಬ್ಬಂದಿ ಇರಬೇಕಿತ್ತು. ಆದರೆ, ಈಗ 203 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದರೆ, 255 ಹುದ್ದೆಗಳು ಖಾಲಿ ಉಳಿದಿವೆ.

ADVERTISEMENT

ಕಚೇರಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸಹಾಯಕರ ಒಟ್ಟು 26 ಹುದ್ದೆಗಳಿವೆ. ಅದರಲ್ಲಿ 9 ಮಂದಿ ಕೆಲಸ ನಿರ್ವಹಿಸುತ್ತಿದ್ದು, 17 ಹುದ್ದೆಗಳು ಖಾಲಿ ಇವೆ. ಬೆರಳಚ್ಚುಗಾರರ 8 ಹುದ್ದೆಗಳಿದ್ದು, ಮೂರು ಮಂದಿ ಮಾತ್ರ ಇದ್ದಾರೆ. ಉಳಿದ ಐದು ಹುದ್ದೆಗಳು ಖಾಲಿ ಇವೆ.

65 ಮಂದಿ ನಿಲಯ ಮೇಲ್ವಿಚಾ ರಕರು ಇರಬೇಕಾಗಿತ್ತು. ಆದರೆ, ಈಗ 46 ಮಂದಿ ಮಾತ್ರ ಇದ್ದು, 19 ಹುದ್ದೆಗಳು ಭರ್ತಿಯಾಗಿಲ್ಲ. 12 ಮಂದಿ ಕಿರಿಯ ನಿಲಯಪಾಲಕ 12 ಹುದ್ದೆಗ ಳಿದ್ದು, 8 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾಲ್ಕು ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ.

ಹಾಸ್ಟೆಲ್‌ಗಳಲ್ಲಿ ವಸತಿ ಜತೆಗೆ ಊಟದ ವ್ಯವಸ್ಥೆಯೂ ಬಹಳ ಮುಖ್ಯ. ಹೀಗಾಗಿ, ಅಡುಗೆ ಮಾಡುವವರೂ ಇರಬೇಕು. ಆದರೆ, ಜಿಲ್ಲೆಗೆ ಮಂಜೂರಾದ 160 ಅಡುಗೆ ಯವರಲ್ಲಿ, 81 ಮಂದಿ ಕಾರ್ಯ ನಿರ್ವಹಿಸು ತ್ತಿದ್ದು, 79 ಹುದ್ದೆಗಳು ಖಾಲಿಯಾಗಿವೆ.

ಅಡುಗೆ ಸಹಾಯಕರ 91 ಹುದ್ದೆ ಮಂಜೂರಾಗಿದ್ದು, ಕೇವಲ 20 ಮಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. 71 ಹುದ್ದೆ ಖಾಲಿ ಇವೆ. ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಂಡು ನಿರ್ವಹಿ ಸಲಾಗುತ್ತಿದೆ. ಇದರಿಂದ ಊಟದ ವ್ಯವಸ್ಥೆ ಮೇಲೆಯೂ ಹೊಡೆತ ಬೀಳುತ್ತದೆ. ಆಗಾಗ ವಿದ್ಯಾರ್ಥಿಗಳು ಊಟ ಸರಿಯಿಲ್ಲ ಎಂದು ಪ್ರತಿಭಟನೆ ಮಾಡಿದ ಸುದ್ದಿ ಕೇಳಿ ಬರುತ್ತಿರುತ್ತದೆ.

ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ರಾತ್ರಿ ಕಾವಲುಗಾರರನ್ನು ನೇಮಿಸಲಾಗು ತ್ತದೆ. 66 ಹುದ್ದೆಗಳು ಮಂಜೂರಾಗಿದ್ದು, ಕೇವಲ 14 ಮಂದಿ ಮಾತ್ರ ಕೆಲಸ ನಿರ್ವಹಿ ಸುತ್ತಿದ್ದಾರೆ. ಉಳಿದ ಹುದ್ದೆಗಳು ಖಾಲಿ ಇವೆ.

ಕಾವಲುಗಾರರ ಕೊರತೆಯಿಂದಾಗಿ ಹಲವಾರು ವಿದ್ಯಾರ್ಥಿನಿಯರ ನಿಲಯಕ್ಕೂ ಹಗಲಿನ ವೇಳೆಯಲ್ಲಿ ಭದ್ರತಾ ವ್ಯವಸ್ಥೆ ಇಲ್ಲ. ಅಡುಗೆ ಮಾಡುವವರೇ ಹಗಲು ಹೊತ್ತಿನಲ್ಲಿ ಕಾವಲುಗಾರರ ಕೆಲಸವನ್ನೂ ಮಾಡ ಬೇಕಾದ ಅನಿವಾರ್ಯತೆ ಇದೆ. ಅಭದ್ರತೆಯ ವಾತಾವರಣದಲ್ಲಿಯೇ ವಿದ್ಯಾರ್ಥಿನಿಯರು ಇದ್ದಾರೆ.

ಗುತ್ತಿಗೆ ಆಧಾರದ ಮೇಲೆ ತೆಗೆದು ಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ. ಜತೆಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಲಾಗಿದೆ ಎಂದು ಇಲಾಖೆ ಅಧಿಕಾರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.