ADVERTISEMENT

5 ಕೋಟಿ ವೆಚ್ಚದಲ್ಲಿ ಹಸುಗಳಿಗೆ ವಿಮೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 8:55 IST
Last Updated 6 ಡಿಸೆಂಬರ್ 2017, 8:55 IST

ಮದ್ದೂರು: ‘ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ₹ 5ಕೋಟಿ ವೆಚ್ಚದಲ್ಲಿ ಜಿಲ್ಲೆಯಲ್ಲಿ 65 ಸಾವಿರ ಹಸುಗಳಿಗೆ ವಿಮೆ ಸೌಲಭ್ಯ ಕಲ್ಪಿಸಿದೆ’ ಎಂದು ಮನ್‌ಮುಲ್‌ ಅಧ್ಯಕ್ಷ ಕದಲೂರು ರಾಮಕೃಷ್ಣ ಮಂಗಳವಾರ ಹೇಳಿದರು.

ಸಮೀಪದ ರಾಜೇಗೌಡನದೊಡ್ಡಿಯ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜು, ಪಶು ವೈದ್ಯಕೀಯ ಇಲಾಖೆ ಹಾಗೂ ಮನ್‌ಮುಲ್‌ ಏರ್ಪಡಿಸಿದ್ದ ‘ಬರಡು ರಾಸುಗಳ ಚಿಕಿತ್ಸಾ ಶಿಬಿರ’ಕ್ಕೆ ಚಾಲನೆ ನೀಡಿ ಮಾತನಾಡಿದರು.

‘2013-14ರಲ್ಲಿ ಕಾಲುಬಾಯಿ ಜ್ವರದಿಂದ ಜಿಲ್ಲೆಯಲ್ಲಿ 1324 ರಾಸುಗಳು ಸತ್ತಿದ್ದವು. ಮೂರು ವರ್ಷಗಳಿಂದ ಮನ್‌ಮುಲ್‌, ಪಶು ಸಂಗೋಪನಾ ಇಲಾಖೆ ಜಂಟಿಯಾಗಿ ಪಶು ಆರೋಗ್ಯ ಶಿಬಿರ, ಔಷಧೋಪಚಾರ ಕಾರ್ಯಕ್ರಮ ನಡೆಸಿದ ಹಿನ್ನಲೆಯಲ್ಲಿ ರಾಸುಗಳ ಸಾವಿನ ಸಂಖ್ಯೆ ಕ್ಷೀಣಿಸಿದೆ ಎಂದರು.

ADVERTISEMENT

ವೈದ್ಯರಾದ ಡಾ.ಹನುಮೇಗೌಡ, ಡಾ.ಶಿವಕುಮಾರ್, ಡಾ.ಗೋವಿಂದ್ ಅವರು ಬರಡು ರಾಸುಗಳಿಗೆ ಚಿಕಿತ್ಸೆ ನೀಡಿ ಔಷಧಿ ವಿತರಿಸಿದರು. ಪ್ರಾಂಶುಪಾಲ ಯು.ಎಸ್.ಶಿವಕುಮಾರ್, ಎನ್ಎಸ್ಎಸ್ ಅಧಿಕಾರಿ ಪಂಚಲಿಂಗೇಗೌಡ, ಸಹಶಿಬಿರಾಧಿಕಾರಿ ಎನ್.ರೇವಣ್ಣ ಭಾಗವಹಿಸಿದ್ದರು.

* * 

‘ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರಾಸುಗಳಿವೆ. ರೈತರು ತಪ್ಪದೇ ವಿಮಾ ಸೌಲಭ್ಯ ಪಡೆದು, ಆರ್ಥಿಕ ನಷ್ಟದಿಂದ ರಕ್ಷಣೆ ಪಡೆಯಬೇಕಿದೆ
ಕದಲೂರು ರಾಮಕೃಷ್ಣ
ಅಧ್ಯಕ್ಷ, ಮನ್‌ಮುಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.