ADVERTISEMENT

ಕಬಿನಿ ಜಲಾಶಯ ಭರ್ತಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 6:58 IST
Last Updated 19 ಸೆಪ್ಟೆಂಬರ್ 2017, 6:58 IST
ಕಬಿನಿ ಜಲಾಶಯ ಭರ್ತಿ
ಕಬಿನಿ ಜಲಾಶಯ ಭರ್ತಿ   

ಎಚ್.ಡಿ.ಕೋಟೆ: ರಾಜ್ಯದ ಮುಂಗಾರಿಗೆ ಅತ್ಯಂತ ಬೇಗನೆ ಭರ್ತಿಯಾಗುತ್ತಿದ್ದ ಜಲಾಶಯ ಈಗ ಬಹುತೇಕ ತುಂಬಿದ್ದು, ಇನ್ನೆರಡು ಅಡಿ ಮಾತ್ರ ಬಾಕಿ ಇದೆ.ಜಲಾಶಯ ತುಂಬಿದ್ದು ಅಚ್ಚುಕಟ್ಟು ಭಾಗದ ರೈತರು ಮತ್ತು ತಾಲ್ಲೂಕಿನ ಜನರ ಮುಖದಲ್ಲಿ ಸಂತಸ ಮೂಡಿಸಿದೆ.

2284 ಅಡಿ ಸಾಮರ್ಥ್ಯವಿರುವ ಜಲಾಶಯದಲ್ಲಿ ಪ್ರಸ್ತುತ 2281.50 ಅಡಿ ನೀರು ಸಂಗ್ರಹವಾಗಿದ್ದು 16,500 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿದೆ. 15,000 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ಹಿನ್ನೀರಿನ ಪ್ರದೇಶ ಮತ್ತು ಕೇರಳದ ವೈನಾಡಿನಲ್ಲಿ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ.

19.50 ಟಿಎಂಸಿ ಅಡಿ ನೀರು ಸಂಗ್ರಹದ ಸಾಮರ್ಥ್ಯವಿದ್ದು, ದ್ಯ 17.50 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಅದರಲ್ಲಿ 16.50 ಟಿಎಂಸಿ ಅಡಿ ನೀರನ್ನು ಮಾತ್ರ ಬಳಕೆ ಮಾಡಬಹುದಾಗಿದೆ.

ADVERTISEMENT

ಪ್ರತಿವರ್ಷ ಬೆಳೆಗೆ ಸುಮಾರು 20 ಟಿಎಂಸಿ ಅಡಿ ಮತ್ತು ಕುಡಿಯಲು 7.86 ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದೆ. ಬೆಂಗಳೂರು ಮಂಡ್ಯ, ಮೈಸೂರು ನಗರಗಳು ಸೇರಿದಂತೆ ಪ್ರತಿ ತಿಂಗಳು ಕುಡಿಯಲು 0.655 ಟಿಎಂಸಿ ಅಡಿ ನೀರು ಬೇಕಿರುತ್ತದೆ. ಇಲ್ಲಿಯವರೆಗೆ ಅಗತ್ಯವಿರುವ ಕುಡಿಯುವ ನೀರು ಪೂರೈಕೆಯಾಗಿದೆ ಎಂದು ಕಬಿನಿ ಜಲಾಶಯದ ಇ.ಇ ಜಗದೀಶ್ ತಿಳಿಸಿದರು.

ಎಚ್ಚರ ವಹಿಸಲು ಸಾರ್ವಜನಿಕರಿಗೆ ಸೂಚನೆ
ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ದಿಢೀರ್‌ ಹೆಚ್ಚಳವಾದ ಕಾರಣ ಜಲಾಶಯದಿಂದ 15 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ಕಬಿನಿ ಜಲಾಶಯದ ಇ.ಇ ಜಗದೀಶ್ ತಿಳಿಸಿದ್ದಾರೆ.

ಹದಿನೈದು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಜಲಾಶಯವು ಭರ್ತಿಯಾಗಿದೆ. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.