ADVERTISEMENT

ಕುಂದು–ಕೊರತೆ ಸಭೆ; ಸಮಸ್ಯೆ ಬಿಚ್ಚಿಟ್ಟ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:50 IST
Last Updated 6 ಫೆಬ್ರುವರಿ 2017, 5:50 IST

ಮೈಸೂರು: ಕುಡುಕರ ತಾಣವಾದ ಸಿ.ಎ ನಿವೇಶನಗಳು, ನಕ್ಷೆ ಅನುಮೋದನೆ ನಂತರ ‘ಮುಡಾ’ ತಕರಾರು, ಉದ್ಯಾನವಿದೆ ದೀಪವಿಲ್ಲ...
ಹೀಗೆ, ಹಲವು ಸಮಸ್ಯೆಗಳು ಇಲ್ಲಿನ ಭ್ರಮಾರಂಭ ಮತ್ತು ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಶಾಸಕ ಎಂ.ಕೆ.ಸೋಮ ಶೇಖರ್ ನೇತೃತ್ವದಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಪ್ರತಿಧ್ವನಿಸಿದವು.

ಎಸ್‌ಬಿಎಂ ಕಾಲೊನಿ ನಿವಾಸಿ ಸ್ವರ್ಣ ಲತಾ, ಉದ್ಯಾನದ ಒಳಗೆ ದೀಪವಿಲ್ಲ. ಇದರಿಂದ ಮುಂಜಾನೆ ಹಾಗೂ ರಾತ್ರಿ ವೇಳೆ ಸಂಚರಿಸುವುದು ದುಸ್ತರವಾಗಿದೆ ಎಂದು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ದನಿಗೂಡಿಸಿದ ಇತರೆ ಸದಸ್ಯರು ಕೇವಲ ಉದ್ಯಾನದಲ್ಲಿ ಮಾತ್ರವಲ್ಲ ಕೆಲವು ಬೀದಿಗಳಲ್ಲೂ ಈ ಸಮಸ್ಯೆ ಇದೆ ಎಂದರು.

ಸಿ.ಎ ನಿವೇಶನಗಳಲ್ಲಿ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಇದರಿಂದ ಕುಡುಕರ ಹಾಗೂ ಅನೈತಿಕ ಚಟುವಟಿಕೆ ಗಳ ತಾಣವಾಗಿ ಪರಿವರ್ತಿತವಾಗಿದೆ. ಜತೆಗೆ, ಬೀದಿನಾಯಿಗಳ ಆವಾಸಸ್ಥಾನ ವಾಗಿವೆ. ಇದರಿಂದ ಬಡಾವಣೆಗಳ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಹಲವು ಸಾರ್ವಜನಿಕರು ದೂರಿದರು. ಈ ಕುರಿತು ಗಮನ ಹರಿಸುವಂತೆ ಮುಡಾ ಆಯುಕ್ತ ಡಾ.ಎಂ.ಮಹೇಶ್ ಅವರಿಗೆ ಶಾಸಕ ಸೋಮಶೇಖರ್ ಸೂಚಿಸಿದರು.

ಅರುಣ್‌ಕುಮಾರ್ ಶೆಟ್ಟರ್ ಮಾತ ನಾಡಿ, ರಸ್ತೆ ಉಬ್ಬುಗಳು ವೈಜ್ಞಾನಿಕವಾ ಗಿಲ್ಲ. ಇದರಿಂದ ಹಿರಿಯ ನಾಗರಿಕರಿಗೆ ವಾಹನ ಓಡಿಸುವುದು ಅಪಾಯಕಾರಿ ಯಾಗಿದೆ ಎಂದು ದೂರಿದರು.

ಎಸ್‌ಬಿಎಂ ನಿವಾಸಿಗಳ ಸಂಘದ ಉಪಾ ಧ್ಯಕ್ಷ ಬಸವಣ್ಣ ಮಾತನಾಡಿ, ಶ್ರೀರಾಂಪುರ ಸಮೀಪದ ಶಿವ ದೇವಾಲಯದ ಸುತ್ತಮುತ್ತಲಿನ ನಿವಾಸಿ ಗಳಿಗೆ ನಗರ ಸಾರಿಗೆ ಬಸ್‌ ಸೌಕರ್ಯ ಇಲ್ಲ. ಮಾರ್ಗ ಸಂಖ್ಯೆಯನ್ನು 80ರ ಮಾರ್ಗವನ್ನು ಬದಲಿಸಿ ಶಿವ ದೇವಾಲ ಯದ ಮೂಲಕ ಹಾದು ಹೋಗುವಂತೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಬಸವರಾಜು ಮಾತನಾಡಿ, ‘ಮುಡಾ’ ನಿರ್ಮಿಸಿರುವ ಹಲವು ಮನೆಗಳು ಖಾಲಿ ಬಿದ್ದಿವೆ. ಇಲ್ಲೆಲ್ಲಾ ಗಿಡಗಂಟಿಗಳು ಬೆಳೆದು ಹಾವು ಚೇಳುಗಳ ಆವಾಸಸ್ಥಾನ ವಾಗಿವೆ. ಇಂತಹ ಮನೆಗಳ ಅಕ್ಕಪಕ್ಕದ ನಿವಾಸಿಗಳಿಗೆ ವಿಷಜಂತುಗಳ ಕಾಟ ವಿಪರೀತವಾಗಿದೆ ಎಂದು ಹೇಳಿದರು.

ಸೋಮಶೇಖರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ಅಭಿವೃದ್ಧಿಗೆ ₹ 300 ಕೋಟಿ ಅನುದಾನ ನೀಡಿದ್ದಾರೆ. ಇದನ್ನು ಎಲ್ಲ ಭಾಗದ ಅಭಿವೃದ್ಧಿಗೂ ವಿನಿಯೋಗಿಸ ಲಾಗುವುದು. ಪ್ರಸ್ತಾಪವಾದ ಸಮಸ್ಯೆ ಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಬಗೆಹರಿಸಬೇಕು ಎಂದು ಸೂಚಿಸಿದರು. ಇದೇ ವೇಳೆ ಅವರು ₹ 2 ಕೋಟಿ ಮೌಲ್ಯದ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು.

ಪಾಲಿಕೆ ಸದಸ್ಯರಾದ ಕೆಂಪಣ್ಣ, ಜಗದೀಶ್, ಆಯುಕ್ತ ಡಾ.ಎಂ.ಮಹೇಶ್, ಪಾಲಿಕೆ ಉಪ ಆಯುಕ್ತ ಸುರೇಶ್‌ಬಾಬು, ಎಸಿಪಿ ಮಲ್ಲಿಕ್, ಪಾಲಿಕೆ ಆರೋಗ್ಯಾಧಿ ಕಾರಿ ಡಾ.ರಾಮಚಂದ್ರ, ಜಿಲ್ಲಾ ಆರೋ ಗ್ಯಾಧಿಕಾರಿ ಡಾ.ಬಿ.ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.