ADVERTISEMENT

ಟ್ರಿಣ್ ಟ್ರಿಣ್; ಮೊದಲ ಒಂದು ಗಂಟೆ ಮಾತ್ರ ಉಚಿತ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 5:43 IST
Last Updated 18 ನವೆಂಬರ್ 2017, 5:43 IST

ಮೈಸೂರು: ‘ಟ್ರಿಣ್ ಟ್ರಿಣ್’ ಬೈಸಿಕಲ್ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಅಲ್ಪಸ್ವಲ್ಪ ಬದಲಾವಣೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಇದುವರೆಗೆ ಒಂದು ದಿನದಲ್ಲಿ ಒಂದು ಗಂಟೆಯ ಒಳಗೆ ಎಷ್ಟೇ ಬಾರಿ ತೆಗದು ಬಳಸಿದರೂ ಉಚಿತ ಇರುತ್ತಿತ್ತು. ಈ ಸೌಲಭ್ಯವನ್ನು ಹಿಂತೆಗೆದುಕೊಳ್ಳಲಾಗುತ್ತಿದ್ದು, ಕೇವಲ ಒಂದು ಗಂಟೆಯಷ್ಟೇ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.

ದಿನದಲ್ಲಿ ಮೊದಲ ಬಾರಿ ಸೈಕಲ್ ತೆಗೆದು ಐದು ನಿಮಿಷ ಓಡಿಸಿದರೂ ಅದು ಒಂದು ಗಂಟೆಯೆಂದೇ ಪರಿಗಣಿಸಲಾಗುತ್ತದೆ. ಒಂದರಿಂದ 60 ನಿಮಿಷಗಳಷ್ಟು ಕಾಲ ದಿನದ ಮೊದಲ ರೈಡ್‌ ಮಾತ್ರ ಉಚಿತ. ನಂತರ, ಪ್ರತಿ ಗಂಟೆಗೆ ₹ 5 ದರವನ್ನು ನಿಗದಿಪಡಿಸಲಾಗಿದೆ.

ಮೊಬೈಲ್ ಆ್ಯಪ್‌ ಮೂಲಕ ಬೀಗ !‌
ಸದ್ಯ ಈಗ ಇರುವ ಸೈಕಲ್‌ಗಳಿಗೆ ಯಾವುದೇ ಲಾಕಿಂಗ್ ವ್ಯವಸ್ಥೆ ಇಲ್ಲ. ಇದರಿಂದ ಸೈಕಲ್ ನಿಲ್ದಾಣದಲ್ಲಿಯೇ ನಿಲ್ಲಿಸಿ ಹೋಗಬೇಕಾದ ಅನಿವಾರ್ಯತೆ ಸಾರ್ವಜನಿಕರಿಗೆ ಇದೆ. ಈ ಸಮಸ್ಯೆಗೆ ಪರಿಹಾರ ಹುಡುಕಲು ಚಿಂತಿಸಿರುವ ಅಧಿಕಾರಿಗಳು, ಮೊಬೈಲ್ ಆ್ಯಪ್ ಮೂಲಕ ಸೈಕಲ್‌ಗೆ ಬೀಗ ಹಾಕುವ ವ್ಯವಸ್ಥೆ ರೂಪಿಸುವ ಯತ್ನದಲ್ಲಿದ್ದಾರೆ.

ADVERTISEMENT

ಇನ್ನಷ್ಟು ಸೈಕಲ್ ನಿಲ್ದಾಣಗಳ ನಿರ್ಮಾಣ: ಈಗ ಇರುವ 49 ಸೈಕಲ್ ನಿಲ್ದಾಣಗಳು ಏನೇನೂ ಸಾಕಾಗುತ್ತಿಲ್ಲ. ಇದರಿಂದ ಇನ್ನೂ 10 ನಿಲ್ದಾಣಗಳನ್ನು ರೂಪಿಸಲು ಚಿಂತಿಸಲಾಗಿದೆ. ಇದರಿಂದ ಇನ್ನಷ್ಟು ಜನರು ಇದರ ವ್ಯಾಪ್ತಿಗೆ ಒಳಪಡಲಿದ್ದಾರೆ. 

ಅಂಕಿ ಅಂಶ

7,286 ಮಂದಿ ನೋಂದಣಿ

850–1,000 ಮಂದಿ ನಿತ್ಯ ಬಳಸುವವರು

49 ಸೈಕಲ್ ನಿಲ್ದಾಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.